ಚಿತ್ರದುರ್ಗ: ಜಿಲ್ಲೆಯ ಜನಪ್ರತಿನಿಧಿಗಳಿಗೆ ರಾಜಕೀಯ ಇಚ್ಚಾ ಶಕ್ತಿ ಇಲ್ಲ. ಬಹಳ ವರ್ಷಗಳಿಂದ ಜಿಲ್ಲೆಯ ಜನರು ಭದ್ರಾಮೇಲ್ದಂಡೆ ಯೊಜನೆಗೆ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಬಂತು ಎ.ಮತ್ತು ಬಿಸ್ಕೀಂ ನಲ್ಲಿ ಸುಮಾರು 70 ಟಿಎಂಸಿ ನೀರು ಸಿಗಬೇಕಾಗಿತ್ತು. ಆದರೆ ಎ ಮತ್ತು ಬಿಸ್ಕೀಂ ಎರಡು ಸೇರಿ 28.5 ಟಿಎಂಸಿ ನೀರು ಮಾತ್ರ ಹಂಚಿಕೆ ಮಾಡಲಾಗಿದೆ. ಇದರಲ್ಲಿ ತುಮಕೂರುಗೆ ಮಂತ್ರಿ ಜಯಚಂದ್ರ 5 ಟಿಎಂಸಿ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಇದು ಸರಿಯಲ್ಲ ಎಂದು ಪತ್ರಕರ್ತ ಬಯಲು ಸೀಮೆಯ ಹೋರಾಟ ಸಮಿತಿಯ ಮುಖಂಡ ಲಕ್ಷ್ಮಣ ಹೂಗಾರ್ ಹೇಳಿದ್ದಾರೆ.
ಚಳ್ಳಕೆರೆ ಮೊಳಕಾಲ್ಮೂರು ತಾಲ್ಲೂಕು ಹಾಗೂ ಹಿರಿಯೂರು ಕೆಲ ಭಾಗಗಳಲ್ಲಿ ಮಳೆ ಪ್ರಮಾಣ ಬಹಳ ಕಡಿಮೆ ಇದೆ. ಆದರೆ ಈ ಭಾಗಗಳಿಗೆ ನೀರನ ಸೌಲಭ್ಯ ನೀಡದೆ ರಾಜಕೀಯ ಮಾಡಿ ಜಯಚಂದ್ರ ತಮ್ಮ ಭಾಗಕ್ಕೆ ನೀರು ತೆಗೆದುಕೊಂಡು ಹೋಗುತ್ತಿರುವುದು ಸರಿನಾ ಎಂದು ಸಕರ್ಾರಕ್ಕೆ ಪ್ರಶ್ನೆ ಮಾಡಿದರು.
ತುಮಕೂರುಗೆ ಮಳೆಯ ಪ್ರಮಾಣ ಎಷ್ಟು ಎಂಬುನ್ನು ಮೊದಲು ಖಚಿತ ಪಡಿಸಿಕೊಂಡು, ಮೊದಲು ಯಾವಭಾಗಕ್ಕೆ ಮೊದಲ ಆಧ್ಯತೆ ನೀಡಬೇಕಂಬ ಸಾಮಾನ್ಯ ಜ್ಞಾನವೂ ಜಯಚಂದ್ರರಿಗೆ ಇದ್ದಂತ್ತಿಲ್ಲ. ಹಾಗೇ ನಮ್ಮ ಜಿಲ್ಲೆಯ ಶಾಸಕರಿಗೂ ಜಿಲ್ಲೆಯ ಬಗ್ಗೆ ಕಾಳಜಿ ಇದ್ದಂತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸುತ್ತಲೇ ಈಗಿರುವ ಪರಿಷ್ಕೃತ ಯೋಜನೆಯನ್ನ ಮತ್ತೊಮ್ಮೆ ಪರಿಶೀಲನೆ ನಡೆಸ ಬೇಕೆಂದು ಒತ್ತಾಯಿಸಿದರು. ಕುಡಿಯುವ ನೀರಿಗೆ ಯಾರಿಗೆ ಕೊಟ್ಟರು ನಮ್ಮ ಅಭ್ಯಾಂತರವಿಲ್ಲ ಎಂದರು.
ಮತ್ತೆ ಹೋರಾಟಕ್ಕೆ ಹೊಸ ರೂಪ ನೀಡಲು ಜುಲೈ ತಿಂಗಳ ಎರಡನೇ ವಾರ ಒಂದು ದಿನದ ಕಾಯರ್ಾಗಾರವನ್ನು ಏರ್ಪಡಿಸಲಾಗಿದ್ದು, ಈ ಕಾರ್ಯಗಾರಕ್ಕೆ ಯುವಕರು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ತಜ್ಞರಿಂದ ಉಪನ್ಯಾಸವನ್ನು ನಡೆಸಲಾಗುತ್ತದೆ.
ನರೇನಹಳ್ಳಿ ಅರುಣಕುಮಾರ್, ರೈತ ಮುಖಂಡರುಗಳಾದ ಈಚಘಟ್ಟ ಸಿದ್ದವೀರಪ್ಪ, ಬಾಳೆಕಾಯಿ ತಿಪ್ಪೇಸ್ವಾಮಿ, ಕುಮರೇಶ್, ತಿಪ್ಪೇಸ್ವಾಮಿ, ಪಾಪಾನಾಯ್ಕ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.