ಚಿತ್ರದುರ್ಗ: ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಹಿರಿಯೂರು ಶಾಸಕ ಡಿ.ಸುಧಾಕರ 30 ರಂದು ಧರ್ಮಪುರ ಬಳಿ ಇರುವ ಜಾಮೀಯ ಮಸಿದಿಯಲ್ಲಿ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷ ಅಲ್ಪ ಸಂಖ್ಯಾತರ ಪರವಾಗಿದ್ದು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ಎಲ್ಲರೂ  ಮತ ಹಾಕಬೇಕೆಂದು ಹೇಳಿದ್ದಾರೆ.

ಇದು ನೀತಿ ಸಂಹಿತೆ ಉಲ್ಲಂಗಿಸದಂತಾಗುತ್ತದೆ ಎಂದು ಬಾಬು ರೆಡ್ಡಿ  ಫ್ಲೈಯಿಂಗ್ ಸ್ಕಾಡ್ಗೆ  ದೂರುನೀಡಿದ್ದಾರೆ. ನೀಡುವ ವರದಿಯನ್ನಾಧರಿಸಿ ಶಾಸಕರಾದ ಸುಧಾಕರ್ ಮೇಲೆ ಎಫ್.ಐ.ಆರ್ 95/18 ರ ಅಡಿಯಲ್ಲಿ ಅಬ್ಬಿನಹೊಳೆ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ