ಬೆಂಗಳೂರು: ಕೋವಿಡ್ 19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲ ಶಾಲೆ ಹಾಗೂ ಕಚೇರಿಗಳಿಗೆ ಪ್ರತಿ ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರವೂ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ,

ರಾಜ್ಯದಲ್ಲಿ ಕೋವಿಡ್​19 ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾಹಿತಿ ನೀಡಿದೆ. ಜುಲೈ 10ರಿಂದ ಆಗಸ್ಟ್​ 8ರ ವರೆಗಿನ ಅವಧಿಗೆ ಮಾತ್ರ ಎಲ್ಲ ಎರಡನೇ ಹಾಗೂ ನಾಲ್ಕನೇ ಶನಿವಾರಗಳಂದು ರಜೆ ಘೋಷಿಸಲಾಗಿದೆ.

ಇನ್ನೂ, ಕೊರೊನಾ ಸೇವೆಯಲ್ಲಿ ನಿರತರಾದ ಹಾಗೂ ಹಾಗೂ ಎಲ್​ಎಸ್​ಎಲ್​ಸಿ ಮೌಲ್ಯಮಾಪನಕ್ಕೆ ನೇಮಿಸಲ್ಪಟ್ಟಿರುವ ಅಧಿಕಾರಿ, ಸಿಬ್ಬಂದಿ ಹಾಗೂ ಶಿಕ್ಷಕರಿಗೆ ಈ ರಜೆ ಅನ್ವಯವಾಗುವುದಿಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ.