ಬೆಂಗಳೂರು : ರಾಜ್ಯ ಸರ್ಕಾರವು ಶಾಲಾ ಮಕ್ಕಳ ಕೇಂದ್ರೀಕೃತ ಯೋಜನೆಗಳಿಗಾಗಿ ಬಜೆಟ್ ನಲ್ಲಿ ಹಣ ಮೀಸಲಿಡಲು ಚಿಂತನೆ ನಡೆಸಿದೆ ಎನ್ನಲಾಗಿದ್ದು, ಶಾಲಾ ಮಕ್ಕಳ ಸಮವಸ್ತ್ರ, ಬಸ್ ಪಾಸ್, ಶಾಲೆಗಳ ರಸ್ತೆ, ಕಟ್ಟಡ, ಬಸ್ ನಿಲ್ದಾಣ ಮೊದಲಾದ ಯೋಜನೆಗಳಿಗೆ ಆದ್ಯತೆ ನೀಡಲಿದೆ. 2020-21 ನೇ ಸಾಲಿನ ಅಯವ್ಯಯದಲ್ಲಿ ಮಕ್ಕಳ ಕೇಂದ್ರಿತ ಯೋಜನೆ ಜಾರಿಗೆ ಸಿದ್ಧತೆ ನಡೆಸಿದೆ.!

ಇನ್ನು ನೆರೆ ಹಾನಿ ಮತ್ತು ಬರಪೀಡಿತ ಪ್ರದೇಶದ ಮಕ್ಕಳಿಗೆ ವಿಶೇಷ ಗಮನ ಹರಿಸುವುದು, ಆರೋಗ್ಯ ವಿಮೆ, ಎಲ್ಲ ಇಲಾಖೆಗಳ ಅನುದಾನ ಬಳಕೆ, ಮಕ್ಕಳ ಹಕ್ಕು ಹೀಗೆ ಮಕ್ಕಳಿಗಾಗಿಯೇ ಪ್ರತ್ಯೇಕ ಬಜೆಟ್ ಜಾರಿಗೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.