ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಅವಧಿಯನ್ನು 100 ದಿನಕ್ಕೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆಯಂತೆ

ಕೇಂದ್ರ ಸರ್ಕಾರವು ಸದ್ಯ 220 ದಿನ ಶಾಲೆ ನಡೆದರೆ 1,320 ತಾಸು ಬೋಧನಾ ಅವಧಿಯನ್ನು ಪರಿಷ್ಕರಿಸಲು ಮುಂದಾಗಿದ್ದು, ಶಾಲಾ ಅವಧಿಯನ್ನು 100 ದಿನಕ್ಕೆ ಹಾಗೂ ಬೋಧನಾ ಅವಧಿಯನ್ನು 600 ತಾಸಿಗೆ ಇಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಬೋಧನಾ ಅವಧಿಯನ್ನು ಪರಿಷ್ಕರಿಸಬೇಕೆಂಬ ಪ್ರಸ್ತಾವನೆಯನ್ನು ತಜ್ಞರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಿದ್ದು, ಪರಿಶೀಲನೆಯಲ್ಲಿದೆ. ಇದರನ್ವಯ 100 ದಿನ, 600 ತಾಸು ತರಗತಿ ಆನ್ ಲೈನ್ ಮೂಲಕ ನಡೆಯಲಿದೆ ಎಂದು ಹೇಳಲಾಗುತ್ತಿದೆ.