ದಾವಣಗೆರೆ/ ಹುಬ್ಬಳ್ಳಿ : ಪ್ರತ್ಯೇಕ ಲಿಂಗಾಯಿತ ಧರ್ಮದ ವಿಚಾರ ಈಗ ಇಬ್ಬರು ನಾಯಕರು ಒಬ್ಬರ ಮೇಲೆ ಒಬ್ಬರು ಕೆರೆಚಾಟದಲ್ಲಿ ಮುಂದಾಗಿದ್ದಾರೆ. ಶಾಮನೂರು ಶಿವಶಂಕರಪ್ಪ ಹಾಗೂ ಎಂ.ಬಿ.ಪಾಟೀಲ್ರು ಏನು ಹೇಳಿದ್ದಾರೆ ಅಂದ್ರೆ

ಶಾಮನೂರು ಶಿವಶಂಕರಪ್ಪ ಒಬ್ಬ ಸ್ವಾರ್ಥಿಕೀಳು ಮಟ್ಟದ ಹೇಳಿಕೆ ಕೊಡ್ತಾರೆ ಅಂತ ಹುಬ್ಬಳ್ಳಿಯಲ್ಲಿ ಎಂಬಿ ಪಾಟೀಲರು ಹೇಳಿದರು. ಏಕೆಂದ್ರೆ ಲಿಂಗಾಯತ ಧರ್ಮ ನಮ್ಮ ಅಸ್ಮಿತೆ, ಲಿಂಗಾಯತ ಧರ್ಮದ ಮೇಲೆ ನನ್ನ ಅಧಿಕಾರದ ಪ್ರಭಾವ ಬೀರುವುದಿಲ್ಲ ಹೇಳಿದ್ದಾರೆ. ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡುವವರು ಹೋರಾಟವನ್ನು ಮುಂದುವರೆಸುತ್ತಾರೆ. ಶಾಮನೂರು ಶಿವಶಂಕರಪ್ಪನವರಿಗೆ ಒಬ್ಬ ಸ್ವಾರ್ಥಿ, ಕೀಳು ಮಟ್ಟದ ಹೇಳಿಕೆ ಕೊಡುತ್ತಾ, ಅಸಹ್ಯವಾಗಿ ಮಾತನಾಡುತ್ತಾರೆ ಎಂದು ಅವರು ಹೇಳಿದ ಬೆನ್ನೆಲ್ಲೆ ಎಂ.ಬಿ. ಪಾಟೀಲ್ ಒಬ್ಬ ಮಂಗ ಅಂತ ಶಾಮನೂರು ಶಿವಶಂಕರಪ್ಪ ತಿರುಗೇಟು ನೀಡಿದ್ದಾರೆ.!

ದಾವಣಗೆರೆಯಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ ಎಂ.ಬಿ. ಪಾಟೀಲ್ ಒಬ್ಬ ಮಂಗ. ಅವನು ಅಡ್ಡ ದಾರಿ ಹಿಡಿದಿದ್ದ ನಾನು ಮತ್ತು ಪ್ರಭಾಕರ್ ಕೋರೆ ಸೇರಿಕೊಂಡು ಆತನನ್ನು ಉದ್ಧಾರ ಮಾಡಿದ್ದೇವೆ ಎಂದು ಟೀಕಿಸಿದ್ದಾರೆ