ಬೆಂಗಳೂರು: ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರ ಪುತ್ರ ಶಾಮನೂರು ಗಣೇಶ್‌ ಅವರಿದ್ದ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ ಪೇಟೆ ಕೈಗಾರಿಕಾ ಪ್ರದೇಶದ ಬಳಿ ನಡೆದಿದೆ.

ಶಾಮನೂರು ಗಣೇಶ್‌ ತಮ್ಮ ಚಾಲಕ ಮಂಜುನಾಥ್‌ ಹಾಗೂ ವೀರೇಶ್‌ ಎಂಬವರ ಜೊತೆ ತುಮಕೂರು ಮಾರ್ಗವಾಗಿ ಬಿ.ಎಂ.ಡಬ್ಲೂ. ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾಗ ನೆಲಮಂಗಲದ ದಾಬಸ್‌ ಪೇಟೆ ಬಳಿ ಸ್ಕೂಟಿ ಸವಾರ ಬೆಂಗಳೂರಿನ ಯೋಗಾನಂದ್‌ ಎಂಬವರಿಗೆ ಡಿಕ್ಕಿ ಹೊಡೆದಿದೆ.

ಇದರಿಂದಾಗಿ ಸ್ಕೂಟಿ ಸವಾರ ಸಾವನ್ನಪ್ಪಿದ್ದು, ಶಾಮನೂರು ಗಣೇಶ್‌ ಹಾಗೂ ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಇವರುಗಳು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.!