ಚಿತ್ರದುರ್ಗ: ಭಾರತ ಚುನಾವಣ ಆಯೋಗದ ಸೂಚನೆಯಂತೆ ಇಂದಿನಿಂದ ನೀತಿ ಸಂಹಿತೆ ಜಾರಿ, ಡಿಸಿ ವಿ.ವಿ ಜೋತ್ಸ್ನಾ  ಹೇಳಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾಮಾಣಿಕ ಮತ್ತು ಶಾಂತಿಯುತ ಚುನಾವಣೆಗೆ ಜಿಲ್ಲಾಡಳಿತ ಸಜ್ಜುಗೊಂಡಿದೆ.

ಏಪ್ರಿಲ್ 17ರಂದು ಅಧಿಸೂಚನೆ ಹೊರಡಿಸಲಾಗುವುದು, ನಾಮ ಪತ್ರ ಸಲ್ಲಿಸಲು 24ರ ವರೆಗೆ ಗಡುವು, ನಾಮಪತ್ರ ಪರಿಶೀಲನೆ 25ರಂದು ನಡೆಯಲಿದೆ, 27ರಂದು ನಾಮಪತ್ರ ಹಿಂಪಡೆಯಲು ಅವಕಾಶ, ಮೇ 12ರಂದು ಮತದಾನ ಪ್ರಕ್ರಿಯೆ,ಮೇ 15ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.

ಆಯಾ ಕ್ಷೇತ್ರದ ಅಭ್ಯರ್ಥಿಗಳು ಆಯಾ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ,

ಜಿಲ್ಲೆಯಲ್ಲಿ 667154 ಪುರುಷರು, 653503 ಮಹಿಳೆಯರು ಮತ್ತು 97  ಇತರೆ ಮತದಾರರು ಸೇರಿದಂತೆ ಒಟ್ಟು 1320657 ಮತದಾರರಿದ್ದಾರೆ,

ಮೊಳಕಾಲ್ಮೂರಿನಲ್ಲಿ 279, ಚಳ್ಳಕೆರೆಯಲ್ಲಿ 254, ಚಿತ್ರದುರ್ಗದಲ್ಲಿ 280, ಹಿರಿಯೂರಿನಲ್ಲಿ 285, ಹೊಸದುರ್ಗದಲ್ಲಿ 236, ಹೊಳಲ್ಕೆರೆಯಲ್ಲಿ 294 ಮತಗಟ್ಟೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1628 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ,

ಮತದಾನ ಪ್ರಕ್ರಿಯೆಗೆ 2450 ಬ್ಯಾಲೆಟ್ ಯುನಿಟ್, 1952 ಕಂಟ್ರೋಲ್ ಯುನಿಟ್ ಮತ್ತು 2061ವಿವಿ ಪ್ಯಾಟ್ ಗಳನ್ನು ಬಳಸಲಾಗುತ್ತದೆ, ಇಂದಿನಿಂದ ಸರ್ಕಾರಿ ಜಾಹಿರಾತುಗಳನ್ನು ತೆರವುಗೊಳಿಸಲಾಗುತ್ತದೆ,

ಮತದಾನದ ಮಹತ್ವದ ಕುರಿತ ಅರಿವು ಮೂಡಿಸುವ ಸಲುವಾಗಿ ಜಾಹಿರಾತು ಫಲಕಗಳನ್ನು ಬಳಸಿಕೊಳ್ಳಲಾಗುತ್ತದೆ,

ಮಾದರಿ ನೀತಿ ಸಂಹಿತೆ ಜಾರಿಗೊಳಿಸಲು 6ತಂಡಗಳು ಕಾರ್ಯ ನಿರ್ವಹಿಸುತ್ತವೆ,

SST 41*3, FS 39, 41 ಚಕ್ ಪೋಸ್ಟ್, VST 21, VVT 7, AT 7, ಮತ್ತು ಸಹಾಯಕ ಖರ್ಚು ವೆಚ್ಚ ವೀಕ್ಷಕರ 7 ತಂಡಗಳು ಇಂದಿನಿಂದಲೇ ಕಾರ್ಯನಿರ್ವಹಿಸುತ್ತವೆ ಎಂದು  ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ವಿ.ವಿ ಜೋತ್ಸ್ನಾ ಹೇಳಿದ್ದಾರೆ.