ಬೆಂಗಳೂರು: ಶರತ್ ಬಚ್ಚೇಗೌಡ ಅವರನ್ನು ಪಕ್ಷದಿಂದ ಉಚ್ಚಾಟಿಸಿ, ಅವರಿಗೆ ಕೊಟ್ಟ ಹೌಸಿಂಗ್ ಬೋರ್ಡ್ ಅಧ್ಯಕ್ಷ ಸ್ಥಾನ ವಾಪಸ್ ಪಡೆಯುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ನೂರಕ್ಕೆ ನೂರು ಸೋಲುತ್ತಾರೆ. ಅಲ್ಲಿ ನಮ್ಮ ಅಭ್ಯರ್ಥಿ ಎಂಟಿಬಿ ನಾಗರಾಜ್ ಗೆಲ್ಲುವುದು ನಿಶ್ಚಿತ. ಗೆದ್ದ ನಂತರ ಎಂಟಿಬಿ ಸಚಿವರಾಗುತ್ತಾರೆ. ಎಂಟಿಬಿ ಅವರಂಥ ಪ್ರಾಮಾಣಿಕ ವ್ಯಕ್ತಿ ಮತ್ತೊಬ್ಬರು ಸಿಗಲ್ಲ ಎಂದು ಸಿಎಂ ನಾಗರಾಜ್ ಅವರನ್ನು ಹಾಡಿ ಹೊಗಳಿದ್ದಾರೆ ಸಿಎಂ ಯಡಿಯೂರಪ್ಪನವರು.!