ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಬೆಳಿಗ್ಗೆ ಸೌಹಾರ್ಧ ನಡಿಗೆ ಶರಣ ಸಂಸ್ಕೃತಿ ಕಡೆಗೆ ಕಾರ್ಯಕ್ರಮವನ್ನು ಶರಣರು ಉದ್ಘಾಟಿಸಿದರು.
ನಗರದ ಕನಕ ವೃತ್ತ, ಕೋಟೆ ಮುಂಭಾಗ. ಜೋಗಿಮಟ್ಟಿ ರಸ್ತೆಯ ಪಟ್ಟದ ಪರಮೇಶ್ವರಿ ಶಾಲೆ, ಚಳ್ಳಕೆರೆ ಗೇಟ್, ಆರ್.ಟಿ.ಓ ಕಚೇರಿ ಹತ್ತಿರ, ರಾ.ಹೆ-೧೩ರ ಗ್ರಾಮಾಂತರ ಪೋಲಿಸ್ ಠಾಣೆ, ರೈಲ್ವೆ ಸ್ಟೆಷನ್ ಎಸ್.ಜೆ.ಎಂ.ಐ.ಟಿ ಮಹಿಳಾ ವಿದ್ಯಾರ್ಥಿ ನಿಲಯ ಮೊದಲಾದ ಸ್ಥಳಗಳಿಂದ ಆರಂಭಗೊಂಡ ವಿವಿಧ ತಂಡಗಳ ನಡಿಗೆಯು ಗಾಂಧಿವೃತ್ತದಲ್ಲಿ ಒಟ್ಟುಗೂಡಿ ಸೌಹಾರ್ಧ ನಡಿಗೆಯು ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಶ್ರೀಮಠದ ಅನುಭವ ಮಂಟಪದವರೆಗೆ ಸಾಗಿ ಬಂದಿತು. ಈ ಸೌಹಾರ್ಧ ನಡಿಗೆಯಲ್ಲಿ ಶರಣ ಸಂಸ್ಕೃತಿ ಉತ್ಸವ ಕಾರ್ಯಾದ್ಯಕ್ಷರಾದ ಶ್ರೀ ಸಿ.ಶಂಕರಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಆಂಜನೇಯ, ನಗರಸಭೆಯ ಉಪಾಧ್ಯಕ್ಷರಾದ ಶ್ರೀ ಮಲ್ಲೇಶಪ್ಪ, ಶ್ರೀನಿವಾಸ್‌ನಾಯ್ಕ, ಸಿದ್ದಾಪುರದ ಪಟೇಲ್ ಶಿವಕುಮಾರ್, ಬಾಪೂಜಿ ವಿದ್ಯಾಸಂಸ್ಥೆಯ ಕೆ.ಎಂ.ವೀರೇಶ್, ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯದರ್ಶಿಯಾದ ಕೆ.ವಿ.ಪ್ರಭಾಕರ್, ಕಾರ್ಯನಿರ್ವಣಾಧಿಕಾರಿಗಳಾದ ಡಾ. ಜಿ.ಎನ್ ಮಲ್ಲಿಕಾರ್ಜುನಪ್ಪ, ಡಾ. ಈ ಚಿತ್ರಶೇಖರ್ ಮತ್ತು ದೊರೆಸ್ವಾಮಿ, ವಿವಿಧ ಸಂಸ್ಥೆಯ ಮುಖ್ಯಸ್ಥರು ಹಾಗೂ ಸಾವಿರಾರು ಸಂಖ್ಯೆಯ ವಿದ್ಯಾರ್ಥಿ ವೃಂಧದವರು ಶರಣರ ಜೊತೆ ನಗರದ ವಿವಿಧ ಸಂಘ ಸಂಸ್ಥೆಯವರು ಪಾಲ್ಗೊಂಡಿದ್ದರು.
ಸೌಹಾರ್ದ ನಡಿಗೆ ನೇತೃತ್ವವನ್ನು ವಹಿಸಿದ್ದ ಡಾ.ಶಿವಮೂರ್ತಿ ಮುರುಘ ಶರಣರು ಮಾತನಾಡಿ ಇಂದಿನ ಶರಣ ಸಂಸ್ಕೃತಿ ಉತ್ಸವವು ಸೌಹಾರ್ಧ ನಡಿಗೆಯೊಂದಿಗೆ ಪ್ರಾರಂಭವಾಗಿರುವುದು ಶಾಂತಿಯ ಹೆಜ್ಜೆಗೆ ಹೆಜ್ಜೆ ಹಾಕಿದಷ್ಟು ಸಂತೋಷವಾಗಿದೆ. ಒಂದು ದಿನ ಆಂಜನೇಯರವರ ಜೊತೆ ಹಿಂದುಳಿದ ವರ್ಗದವರ ಜೊತೆ ಸಹ ಬೊಜನ ಮಾಡಿದೆ ಕಾರಣ ಜಾತಿವಾದ, ಕೊಮುವಾದದ ಜೊತೆ ಮೂಲಭೂತವಾದ ಸೇರಿದೆ. ಈ ಮೂರು ಅನೇಕ ಸಂಘಟನೆಯಲ್ಲಿ ಸೇರಿ ಅಸಹನೆ, ಅಶಾಂತಿ ಸೃಷ್ಠಿಯಾಗುತ್ತಿದೆ. ಶರಣ ಪರಂಪರೆಯ ಎಂ.ಎಂ. ಕಲುಬುರ್ಗಿರವರು ಲಿಂಗಾಯತ ಧರ್ಮ ಉದಯವಾಗಲು ಕಾರಣ ಕರ್ತರು. ಅವರು ಬರೆದಿರುವ ಪುಸ್ತಕದಲ್ಲಿ ೭೦ ಉಪ ಲಿಂಗಾಯತ ಜಾತಿಗಳು ಸೇರಿ ಲಿಂಗಾಯತ ಧರ್ಮವಾಗಿದೆ ಎಂದಿದ್ದರು. ಬುದ್ದ ಬಸವಾದಿ ಕಾಲದಿಂದಲೂ ಮೂಲಭೂತವಾದ ಬಂದಿದೆ. ಒಂದಾನೊಂದು ಕಾಲಕ್ಕೆ ಬಸವಾದಿ ಶರಣರ ತತ್ವಗಳೆಲ್ಲಾ ಮುಂದೊಂದು ದಿನ ಲಿಂಗಾಯತ ಧರ್ಮ ಉದಯವಾಗಿ ಸಮಾಜದಲ್ಲಿ ಶಾಂತಿ, ಪ್ರಗತಿ, ಸೌಹಾರ್ಧತೆ ನೆಲೆಗೊಳ್ಳಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಆಂಜನೇಯ ಮಾತನಾಡಿ ನಾವು ಇಂದು ಸೌಹಾರ್ದತೆಯಿಂದ ಬಾಳಬೇಕು, ಶಾಂತಿ, ನೆಮ್ಮದಿ, ಸೌಹಾರ್ದತೆಯ ಜೊತೆಗೆ ಬಸವಾದಿ ಶರಣರ ದಾರಿಯಲ್ಲಿ ನಡೆದರೆ ಉತ್ತಮ ಸಮಾಜ ಸಾಧ್ಯವಾಗುತ್ತದೆ. ಶರಣರ ಮತ್ತು ಬಸವತತ್ವದ ಬಗ್ಗೆ ಅಪಾರ ಗೌರವ ಮತ್ತು ನಂಬಿಕೆಯಿದೆ, ಅದಕ್ಕೆ ಪೂರಕವಾಗಿ ನಡೆಯುತ್ತೇನೆ ಎಂದರು.

ಚಿತ್ರದುರ್ಗ ನಗರಸಭೆಯ ಆಯುಕ್ತರಾದ ಶ್ರೀ.ಎಂ.ಚಂದ್ರಪ್ಪ ಮಾತನಾಡಿ ವಿಶ್ವದಲ್ಲಿ ೭೨೦ಕ್ಕೂ ಅಧಿಕ ರಾಷ್ಟ್ರಗಳಿದ್ದರೂ ನಮ್ಮ ದೇಶ ವಿಭಿನ್ನ ಏಕೆಂದರೆ ಜಾತಿ, ಧರ್ಮ ಕಲುಶಿತಗೊಳ್ಳುವ ಅಂಶಗಳೇ ಹೆಚ್ಚು ಕಾರಣ ವಿವಿಧ ದೇಶಗಳಲ್ಲಿ ಒಂದು ಅಥವಾ ಎರಡು ಧರ್ಮಗಳಿದ್ದರೆ ನಮ್ಮಲ್ಲಿ ಎಲ್ಲಾರೀತಿಯ ಧರ್ಮ ಜಾತಿಗಳಿವೆ. ಹೀಗಿರುವಾಗ ಎಲ್ಲಾ ಧರ್ಮಿಯರ ಸೌಹಾರ್ಧತೆ ಕಡಿಮೆಯಾಗಿದೆ. ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಅಂಶಗಳು ಅವರ ಸಮಾಜ ಮುಖಿ ನೆಡೆಗಳನ್ನು ನಾವುಗಳು ಇಂದು ಕಾರ್ಯಾಚರಣೆಗೆ ಬರಬೇಕಿದೆ. ಶ್ರೀಗಳ ಈ ರೀತಿಯ ಸೌಹಾರ್ಧ ನಡಿಗೆಯು ಸಮಾಜದಲ್ಲಿ ಸ್ವಾಸ್ಥ್ಯ ಸೃಷ್ಠಿ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ನುಡಿದರು
ಸಮಾರಂಭದಲ್ಲಿ ಕಾರ್ಯಧ್ಯಕ್ಷರಾದ ಶ್ರೀ ಶಂಕರಮೂರ್ತಿ ಸ್ವಾಗತಿಸಿದರು, ಪಟೇಲ್ ಶಿವಕುಮಾರ್ ವಂದಿಸಿದರು, ಪ್ರಾರ್ಥನೆ ಜಮುರಾ ಕಲಾವಿದರು ನೇರವೇರಿಸಿದರು, ಶ್ರೀ ವಿಶ್ವನಾಥ್ ನಿರೂಪಿಸಿದರು.