ಬೀದರ್: ಬಳ್ಳಾರಿ ಮೂಲದ ರಾಜೇಶ್ ವ್ಯಾಪಾರಿಯ 71 ಲಕ್ಷನಗದು ಹಾಗೂ ಕಾರು ಸಮೇತ ಚಾಲಕ ಪರಾರಿಯಾಗಿರುವ ಘಟನೆ ಬೀದರ್ನ ಮನ್ನಾಖೇಳಿಯಲ್ಲಿನಡೆದಿದೆ.!

ಉದ್ಯಮಿ ರಾಜೇಶ್ ಕಾರಿನಲ್ಲಿ 71 ಲಕ್ಷ ಹಣವುಳ್ಳ ಬ್ಯಾಗ್ ಇಟ್ಟು ರೈತ ಸಂಪರ್ಕ ಕೇಂದ್ರಕ್ಕೆ ಹೋಗಿದ್ದರು. ಈ ವೇಳೆ ಕಾರು ಚಾಲಕ ಮಾರುತಿ ಹಣ ತೆಗೆದುಕೊಂಡು ಕಾರಿನ ಸಮೇತ ಪರಾರಿಯಾಗಿದ್ದಾನೆ.!

ರಾಜೇಶ್ ಸೋಯಾ ಸೀಡ್ಸ್ ವ್ಯಾಪಾರ ಮಾಡುತ್ತಿದ್ದರು. ಆದರೆ ರಾಜೇಶ್ ರೈತ ಸಂಪರ್ಕ ಕೇಂದ್ರದಿಂದ ವಾಪಸ್ ಬರುವಷ್ಟರಲ್ಲಿ ಚಾಲಕ ಬ್ಯಾಗ್ ಸಮೇತ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಚಾಲಕ ಹೈದರಾಬಾದ್ ಕಡೆ ಹೋಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಕುರಿತು ಮನ್ನಾಖೇಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.