ಚಿತ್ರದುರ್ಗ: ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ. ಸದಾ ಶಿಕ್ಷಕರ ಒಡನಾಡಿಯಾಗಿ ಪ್ರತಿನಿಧಿಯಾಗಿ ಶಿಕ್ಷಕರ ಸಮಸ್ಯೆಗೆ ಧ್ವನಿಯಾಗಿರತ್ತೇನೆಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಶಿಕ್ಷಕರಿಗೆ ಆಶ್ವಾಸನೆ ನೀಡಿದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಮಹೇಶ್‌ರವರಿಗೆ ವೈ.ಎ.ನಾರಾಯಣಸ್ವಾಮಿರವರ ಅಭಿಮಾನಿ ಬಳಗದಿಂದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಉತ್ತಮ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವುದರಿಂದ ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಪಾಠಗಳನ್ನು ಬೋಧಿಸಲು ಪ್ರೋತ್ಸಾಹಿಸಿದಂತಾಗುತ್ತದೆ. ನಮ್ಮ ಜಿಲ್ಲೆಯಿಂದ ಇನ್ನೂ ಹೆಚ್ಚು ಉತ್ತಮ ಶಿಕ್ಷಕರು ಆಯ್ಕೆಯಾಗಲಿ, ಬಿ.ಜೆ.ಪಿ.ಸರ್ಕಾರ ಸದಾ ಶಿಕ್ಷಕರ ಶ್ರೇಯೋಭಿಲಾಷೆಗೆ ಕಟಿಬದ್ದವಾಗಿದ್ದು, ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ವೈಎಎನ್ ಬಳಗದ ರಾಜೇಶ್, ದೊಡ್ಡಯ್ಯ, ಜಯ್ಯಣ್ಣ, ಶಿವಣ್ಣ, ಲೋಕೇಶ್ವರಪ್ಪ,
ಚಿಕ್ಕನಾಗಪ್ಪ, ಕೀರ್ತಿಕುಮಾರ್, ಅಶೋಕ್, ಚನ್ನಬಸಪ್ಪ ಇನ್ನು ಮುಂತಾದವರು ಅಭಿನಂದನಾ ಸಮಾರಂಭದಲ್ಲಿಲಿ ಬಾಗವಹಿಸಿದ್ದರು.