ಹಬ್ಬ ಹರಿದಿನಗಳಲ್ಲಿ ಯಾವುದೇ ಫಂಕ್ಷನ್ ಗಳಲ್ಲಿ ಊಟವಾದ ಮೇಲೆ ಎಲೆ ಅಡಿಕೆ ಹಾಕಿಕೊಳ್ಳುವುದು ಸಾಮಾನ್ಯ. ಏಕೆಂದ್ರೆ ಎಲೆ ಅಡಿಕೆ ಜೊತೆಗೆ ಸುಣ್ಣ ಹಾಕಿದ್ರೆ ಸಾಕು ಊಟ ಮಾಡಿದ್ದೆಲ್ಲಾ ಕರಗುತ್ತೆ ಎಂಬ ಮಾತು ಕೇಳಿರುತ್ತೀರ. ಹಾಗೇ ಎಲೆ ಅಡಿಕೆ ತಿಂದ್ರೆ ಮೂಳೆಗಳು ಗಟ್ಟಿ ಆಗುತ್ತೆ ಅಂತ ಬಸುರಿ ಹೆಣ್ಣು ಮಕ್ಕಳಿಗೆ ಯಜಮಾನರು ಹೇಳಿರುವುದನ್ನು ಕೇಳಿರುತ್ತೀರ ಅಲ್ವ ಹಾಗಾದ್ರೆ..

ಈ ವೀಳ್ಯದೆಲೆಯಲ್ಲಿರುವ ಔಷಧಿ ಗುಣಗಳ ಬಗ್ಗೆ ಒಮ್ಮೆ ತಿಳಿಯುವುದು ಸೂಕ್ತ. ಮಕ್ಕಳನ್ನು ಆರೋಗ್ಯ ಸಮಸ್ಯೆಯಿಂದ ದೂರವಿಡಲು ಸಹಕಾರಿಯಾಗಿದೆ. ಮಕ್ಕಳಲ್ಲಿ ನೆಗಡಿ, ಕೆಮ್ಮು,ಕಫ‌ ಸಮಸ್ಯೆಯಿದ್ದರೆ ಅವರಿಗೆ ವೀಳ್ಯದೆಲೆ ರಸ. ಅದಕ್ಕೆ ಬಿಳಿ ಈರುಳ್ಳಿ ರಸ ಮತ್ತು ಜೇನುತುಪ್ಪ, ಶುದ್ಧ ಇಂಗನ್ನು ಸೇರಿಸಿ ದಿನಕ್ಕೆ 3 ರಿಂದ 4 ಬಾರಿ ಸೇವಿಸಲು ಕೊಟ್ಟರೆ ಈ ಸಮಸ್ಯೆಗಳು ದೂರವಾಗುತ್ತದೆ. ಇನ್ನು ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವಿಳ್ಯದೆಲೆಯನ್ನು ಎದೆಯ ಮೇಲಿಡುವುದರಿಂದ ಉಸಿರಾಟದ ಸಮಸ್ಯೆ ಇಲ್ಲವಾಗುತ್ತದೆ.!