ಬೆಂಗಳೂರು: ದೇಶದಲ್ಲಿ ವರ್ಷದಿಂದ ವರ್ಷಕ್ಕೆ ವಾತಾವರಣದ ಬದಲಾವಣೆ ಹಾಗೂ ಜನಸಂಖ್ಯೆಯ ಉಲ್ಬಣದಿಂದ ಜಲಸಂಪನ್ಮೂಲದ ಮೇಲಿನ ಬೇಡಿಕೆಯ ಹೊರೆ ದಿನೇ-ದಿನೇ ಹೆಚ್ಚಾಗುತ್ತಿದೆ.

ಇಂದು ವಿಶ್ವ ನೀರಿನ ದಿನದ’ ಅಂಗವಾಗಿ ‘ಬೇನೆಥ್ ದಿ ಸರ್ಫೆಸ್, ದಿ ಸ್ಟೇಟ್ ಆಫ್ ದಿ ವರ್ಲ್ಡ್ ವಾಟರ್- 2019’ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ ಭಾರತದ ಸುಮಾರು 100 ಕೋಟಿ ಜನ ನೀರಿನ ಅಭಾವ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಅದರಲ್ಲಿ 60 ಕೋಟಿ ಜನ ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.