ಬೆಂಗಳೂರು: ನಿತ್ಯ ವಿಶ್ವಾಸ ಮತಕ್ಕೆ ಕ್ಷಣಗಣನೆ ಎಂದು ಬರುತಿದ್ದ ಸುದ್ದಿಗೆ, ಮತ್ತೆ ಎರಡು ದಿನಮುಂದಕ್ಕೆ ಹೋಗಿದೆ.

ಸ್ಪೀಕರ್‌ ರಮೇಶ್‌ ಕುಮಾರ್‌ ಸೋಮವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭಾ ಕಲಾಪವನ್ನು ಮುಂದೂಡಿದ್ದಾರೆ. ಇದೇ ವೇಳೆ ಆಡಳಿತ ಪಕ್ಷ, ಸಿಎಂ ಕುಮಾರಸ್ವಾಮಿಯವರು ಸೋಮವಾರ ವಿಶ್ವಾಸಮತ ಯಾಚಿಸಲು ಸಮ್ಮತಿ ಸೂಚಿಸಿದೆ. ಎಷ್ಟುಗಂಟೆಯಾದರೂ ಸರಿ ಇಂದೇ ವಿಶ್ವಾಸಮತ ಯಾಚನೆ ಪೂರ್ಣಗೊಳಿಸಿ ಎಂದು ಬಿಜೆಪಿ ಬೇಡಿಕೆ ಇಟ್ಟಿತ್ತು. ಜೊತಗೆ ವಿಶ್ವಾಸಮತವನ್ನು ಇಂದೇ ಮುಗಿಸಿ ಎಂದು ರಾಜ್ಯಪಾಲರೂ ಸೂಚಿಸಿದ್ದರು. ಆದರೆ, ಇದಕ್ಕೆ ಜಗ್ಗದ ಮೈತ್ರಿ ಸರ್ಕಾರ ಸೋಮವಾರ ವಿಶ್ವಾಸಮತ ಯಾಚನೆ ಮಾಡುವುದಾಗಿ ಹೇಳಿದೆ.