ಬೆಂಗಳೂರು: ರಾತ್ರಿ  9 ಗಂಟೆಯಷ್ಟರಲ್ಲಿ ವಿಶ್ವಾಸ ಮತ ಸಾಬೀತು ಪಡಿಸಿ ಇಲ್ಲವೆಂದಲ್ಲಿ ನಾನೇ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಸಿಎಂ ಗೆ ಸ್ಪೀಕರ ಹೇಳಿದ್ದಾರೆ.

ದೋಸ್ತಿಗಳ ಚರ್ಚೆ ನಾಲ್ಕನೇ ದಿನವಾದ ಇಂದೂ ಮುಂದುವರಿದಿತ್ತು. ಇಂದು ಕೂಡ ದೋಸ್ತಿಗಳೇ ಸದನದಲ್ಲಿ ಚರ್ಚೆ ನಡೆಸುತ್ತಿದ್ದಾರೆ.

ಆದರೆ ವಿಶ್ವಾಸಮತಕ್ಕೆ ದೋಸ್ತಿ ಸರಕಾರ ಮುಂದಾಗಿಲ್ಲ. ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಅತೃಪ್ತ ಶಾಸಕರಿಗೆ ರಿಲೀಫ್ ಸಿಗಬಹುದಾ.? ಹೀಗೆ ನಾನಾ ಲೆಕ್ಕಾಚಾರ.

ಆದರೆ ಸ್ಪೀಕರ್ ಅವರು ಇಂದು ವಿಶ್ವಾಸ ಮತ ಸಾಬೀತಿಗೆ ಎಷ್ಟು ಹೊತ್ತಾದರೂ ಇರುತ್ತೇನೆ ಎಂದು ಹೇಳಿದ್ದಾರೆ. ಆದರೆ ವಿಶ್ವಾಸಮತ ಇಂದು ಆಗದಿದ್ದರೆ ಸ್ಪೀಕರ್ ರಾಜೀನಾಮೆ ನೀಡಿದರೆ ಮತ್ತೆ ದೋಸ್ತಿ ಸರಕಾರಕ್ಕೆ ಎರಡು ದೀನ ಮತ್ತೆ ಜೀವದಾನ ಸಿಗಬಹುದು ಎಂಬ ಲೆಕ್ಕಾ ದೋಸ್ತಿ ಸರಕಾರಕ್ಕಿದೆ.!