ಜೈಪುರ: ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್​​(ಆರ್‌ಸಿಎ) ಜೈಪುರದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲಿದೆ. ಇದು ವಿಶ್ವದ 3ನೇ ಮತ್ತು ದೇಶದ 2ನೇ ದೊಡ್ಡ ಕ್ರೀಡಾಂಗಣ ಆಗಿರಲಿದೆ.!

ಈ ಕುರಿತು ಆರ್‌ಸಿಎ ಕಾರ್ಯದರ್ಶಿ ಮಹೇಂದ್ರ ಶರ್ಮಾ ಮಾಹಿತಿ ನೀಡಿದ್ದು, ಇದು ಗುಜರಾತ್‌ನ ಮೊಟೆರಾ ಹಾಗೂ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರೀಡಾಂಗಣದ ನಂತರದ ಸ್ಥಾನ ಅಲಂಕರಿಸಲಿದ್ದು, 75 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರಲಿದೆ. ಈ ಕ್ರೀಡಾಂಗಣವನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗುವುದು ಎಂದಿದ್ದಾರೆ.!