ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ದಂಪತಿ ಸಂಭ್ರಮ ಸಡಗರದಲ್ಲಿದ್ದಾರೆ. ಮೊದಲ ಮಗುವನ್ನು ಸ್ವಾಗತಿಸಿದ ವಿರುಷ್ಕಾ ಜೋಡಿಗೆ ಅಭಿನಂದನೆಗಳ ಸುರಿಮಳೆ ಹರಿದು ಬರುತ್ತಿದೆ. ನಿನ್ನೆ ಮಧ್ಯಾಹ್ನ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮಗು ಜನಿಸಿದ ಬಳಿಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸುವ ಮೂಲಕ ಸಂತಸದ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊAಡಿದ್ದರು. ಅನುಷ್ಕಾ ಮತ್ತು ವಿರಾಟ್ ಮಗಳು ಹೇಗಿದ್ದಾಳೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಕಾತುರತೆ ಇದೆ.

ಮಗುವನ್ನು ಮಾಧ್ಯಮಗಳಿಂದ ದೂರ ಇಡುವುದಾಗಿ ಅನುಷ್ಕಾ ಈ ಹಿಂದೆಯೇ ಹೇಳಿದ್ದರು. ಹಾಗಾಗಿ ಮಗಳ ಫೋಟೋ ರಿವೀಲ್ ಮಾಡಿಲ್ಲ. ಆದರೆ ಹೀಗ ಅನುಷ್ಕಾ ಶರ್ಮಾ ಅವರ ಸೋದರಮಾವ ಅನುಷ್ಕಾ ಮತ್ತು ವಿರಾಟ್ ದಂಪತಿಯ ಮುದ್ದು ಮಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

ಮನೆಗೆ ಆಗಮಿಸಿದ ಲಕ್ಷಿö್ಮಯನ್ನು ಸ್ವಾಗತಿಸಿ ಅನುಷ್ಕಾ ಮಾವ ಪುಟ್ಟ ಕಂದನ ಕಾಲುಗಳ ಫೋಟೋವನ್ನು ಶೇರ್ ಮಾಡಿದ್ದಾರೆ. ಅನುಷ್ಕಾ ಮಗುವಿಗೆ ಜನ್ಮ ನೀಡಿದ ಬಳಿಕ ಫೋಟೋ ಶೇರ್ ಮಾಡಿ ವಿಕಾಸ್ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ಮನೆಯಲ್ಲಿ ದೇವತೆ ಎಂದು ಬರೆದುಕೊಂಡಿದ್ದಾರೆ. ಆದರೆ ಅನುಷ್ಕಾ ಮತ್ತು ವಿರಾಟ್ ಮಗಳು ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಹಾಗಾಗಿ ಅಭಿಮಾನಿಗಳಿಗೆ ಇದು ಅನುಷ್ಕಾ ಮಗುವಿನ ಫೋಟೋನಾ ಎನ್ನುವ ಅನುಮಾನ ಕಾಡಿದೆ.

ಅದೇನೆ ಇದ್ರು ಅನುಷ್ಕಾ ಶರ್ಮಾ ಮಾವ ಶೇರ್ ಮಾಡಿರುವ ಫೋಟೋ ವೈರಲ್ ಆಗುತ್ತಿದೆ. ಮಗಳು ಜನಿಸಿದ ಬಗ್ಗೆ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಪ್ರೀತಿ, ಪ್ರಾರ್ಥನೆ ಮತ್ತು ಶುಭಾಶಯಗಳಿಗೆ ಧನ್ಯವಾದಗಳು. ಅನುಷ್ಕಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ನಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಭಿಸಿದ್ದೇವೆ. ನಮ್ಮ ಖಾಸಗಿತನವನ್ನು ಗೌರವಿಸುತ್ತೀರಿ ಎಂದು ಭಾವಿಸಿದ್ದೇನೆ ಎಂದು ಬಹಿರಂಗ ಪಡಿಸಿದ್ದರು.