ಶಿವಮೊಗ್ಗ: ಹೌದ….ಭಕ್ತಿಯ ಕುರುಹಾಗಿ ಬಳಸುತ್ತಿದ್ದ ವಿಭೂತಿ ಈಗ ಕೊರೋನಾ ನಿಯಂತ್ರಣಕ್ಕೂ ಮದ್ದು ಎಂಬ ಸುದ್ದಿ ಮಲೆನಾಡಿನಲ್ಲಿ ಚಾಲ್ತಿಯಲ್ಲಿದ್ದು, ಅಕ್ಷರಶಃ ಕೊರೋನಾ ಸೋಂಕು ತಡೆಗಟ್ಟುವ ಸಾಧನವಾಗಿ ವಿಭೂತಿ ಬಳಕೆಯಾಗುತ್ತಿದೆ. !

ಯಾವುದೇ ಸೋಂಕು ತಡೆಯುವ ಶಕ್ತಿಯನ್ನು ಭಸ್ಮ ಹೊಂದಿರುವ ಬಗ್ಗೆ ಪುರಾಣ ಗ್ರಂಥಗಳಲ್ಲಿ ಉಲ್ಲೇಖವಿದೆ. ಹಾಗಾಗಿ ಕೊರೋನಾ ಸೋಂಕನ್ನೂ ತಡೆಯುತ್ತದೆ ಎಂಬ ನಂಬಿಕೆಯಿಂದ ಮಲೆನಾಡ ಜನರು ಜಾತಿ, ಮತ ಬಿಟ್ಟು ಭಸ್ಮ ಬಳಸಲು ಶುರು ಮಾಡಿದ್ದಾರಂತೆ.!