ಬೆಂಗಳೂರು: ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ವಿಧಾನಸೌಧದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿಯನ್ನು ಸ್ಥಾಪಿಸಲು ಕ್ರಮವಹಿಸುವಂತೆ ಮನವಿ ಸಲ್ಲಿಸಿದರು.

ವಿಧಾನಸೌಧವು ಆಡಳಿತ ಕೇಂದ್ರವಾಗಿದ್ದು, ಇಲ್ಲಿ ಎಲ್ಲ ದಾರ್ಶನಿಕರ ಪುತ್ಥಳಿಗಳು ಸ್ಥಾಪಿತವಾಗಿವೆ. ಆಯಾ ಜಯಂತಿಗಳಂದು ಮುಖ್ಯಮಂತ್ರಿಗಳು, ಗಣ್ಯರಾದಿಯಾಗಿ ಗೌರವಾರ್ಪಣೆ ಮಾಡುವ ಸಂದರ್ಭ. ಆದರೆ ವಿಧಾನಸೌಧದ ಆವರಣದಲ್ಲಿ ಮಹಾಮಾನವತಾವಾದಿ ಬಸವಣ್ಣನವರ ಪುತ್ಥಳಿ ಸ್ಥಾಪನೆ ಆಗಿರುವುದಿಲ್ಲ. ಕಾರಣ ಕೂಡಲೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೆಂದು ಶರಣರು ಆಗ್ರಹಿಸಿದ್ದಾರೆ.