ಬೆಂಗಳೂರು : ರಾಜ್ಯದ ಆರು ವಿಧಾನ ಪರಿಷತ್ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ಘೊಷಣೆ ಮಾಡಿದ್ದು, ಜೂನ್ 8ರಂದು ಮತದಾನ ನಡೆಯಲಿದೆ. ಮೇ 22ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಮೇ 23ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮೇ 25ರೊಳಗೆ ವಾಪಸ್ ಪಡೆಯಬಹುದು. ಜೂನ್ 8ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಜೂನ್ 12ರಂದು ಮತ ಎಣಿಕೆ ನಡೆಯಲಿದೆ. ಜೂನ್ 15ರೊಳಗೆ ಚುನಾವಣೆಯ ಫಲಿತಾಂಶ ಹೊರಬರಲಿದೆ.

ಜೂನ್21 ಕ್ಕೆ ಕರ್ನಾಟಕ ಆಗ್ನೇಯ ಶಿಕ್ಷಕರ ಮತಕ್ಷೇತ್ರದಿಂದ ಆಯ್ಕೆಯಾಗಿರುವ ರಮೇಶ್​ಬಾಬು, ದಕ್ಷಿಣ ಶಿಕ್ಷಕರ ಮತಕ್ಷೇತ್ರದ ಮರಿತಿಬ್ಬೇಗೌಡ, ನೈಋತ್ಯ ಶಿಕ್ಷಕರ ಮತಕ್ಷೇತ್ರದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ನೈಋತ್ಯ ಪದವೀಧರ ಮತಕ್ಷೇತ್ರದ ಡಿ.ಎಚ್.ಶಂಕರಮೂರ್ತಿ, ಬೆಂಗಳೂರು ಪದವೀಧರ ಮತಕ್ಷೇತ್ರದ ರಾಮಚಂದ್ರಗೌಡ ಹಾಗೂ ಈಶಾನ್ಯ ಪದವೀಧರ ಮತಕ್ಷೇತ್ರದ ಅಮರನಾಥ್ ಪಾಟೀಲ್ ಅವರ ಅವಧಿ ಕೊನೆಗೊಳ್ಳಲಿದೆ ಹಾಗಾಗಿ ಜೂನ್ 8 ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದೆ.