ಬೆಂಗಳೂರು:  ಕಾಂಗ್ರೆಸ್ ನಿಂದ ಸಿ.ಎಂ.ಇಬ್ರಾಹಿಂ, ಕೆ. ಗೋವಿಂದರಾಜ್ ಮರು ಆಯ್ಕೆ ಆಗಿದ್ದಾರೆ. ಅರವಿಂದ ಕುಮಾರ್ ಅರಳಿ ಮತ್ತು ಕೆ.ಹರೀಶ್ ಕುಮಾರ್ ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ.

ಬಿಜೆಪಿಯಿಂದ ರಘನಾಥ್ ರಾವ್ ಮಲ್ಕಾಪುರೆ ಮಾತ್ರ ಮರು ಆಯ್ಕೆಯಾಗಿದ್ದಾರೆ. ತೇಜಸ್ವಿನಿ ಗೌಡ, ಕೆ.ಪಿ.ನಂಜುಂಡಿ, ಎಸ್ ರುದ್ರೇಗೌಡ, ರವಿಕುಮಾರ್ ಪರಿಷತ್ತಿಗೆ ಆಯ್ಕೆಯಾದ ಹೊಸಬರು.

ಜೆಡಿಎಸ್ ನಿಂದ ಬಿ.ಎಂ.ಫಾರೂಕ್ ಹಾಗೂ ಎಸ್.ಎಲ್ ಧರ್ಮೇಗೌಡ ಆಯ್ಕೆಯಾಗಿದ್ದಾರೆ.

.ಒಟ್ಟು 11 ಸ್ಥಾನಗಳಿಗೆ ಮೂರು ಪಕ್ಷಗಳಿಂದ 11 ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಸು ಪಡೆಯುವ ಗಡುವು ಮುಕ್ತಾಯವಾದ ಹಿನ್ನೆಲೆಯಲ್ಲಿ ಹನ್ನಂದೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿಗಳು ಅಧಿಕೃತ ಘೋಷಣೆ ಮಾಡಿದ್ದಾರೆ.