ಬೆಂಗಳೂರು: ಲಾಕ್ ಡೌನ್ ಅವಧಿಯಲ್ಲಿ ಹೆಚ್ಚುವರಿ ಬಿಲ್ ಹೊರೆಯಿಂದ ಶಾಕ್ ಗೊಳಗಾಗಿದ್ದ ವಿದ್ಯುತ್ ಗ್ರಾಹಕರಿಗೆ ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಹೌದು, ಈ ಬಾರಿ ಅಧಿಕ ಭದ್ರತಾ ಠೇವಣಿಯನ್ನು ತಿಂಗಳೊಳಗೆ ಪಾವತಿಸದಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಹೇಳಿವೆ.

ಗ್ರಾಹಕರಿಗೆ ಸರಬರಾಜು ಮಾಡುವ ವಿದ್ಯುತ್ ಲೋಡ್ ಹೆಚ್ಚು ಬಳಕೆಯಾದಲ್ಲಿ ಅಧಿಕ ಭದ್ರತಾ ಠೇವಣಿಯನ್ನು ಸಂಗ್ರಹಿಸಲಾಗುತ್ತದೆ. ಇದು ವಿದ್ಯುತ್ ಗ್ರಾಹಕರಿಗೆ ಮತ್ತೊಂದು ಬರೆ ಎಳೆದಂತಾಗಿದೆ.