ಬೆಂಗಳೂರು: ಈ ಹಿಂದೆ ಸಿದ್ದರಾಮಯ್ಯನವರು ಬಜೆಟ್​ನಲ್ಲಿ ಘೋಷಿಸಿದ್ದ ವಿದ್ಯಾರ್ಥಿಗಳಿಗೆ  ಉಚಿತ ಬಸ್ ಪಾಸ್  ವ್ಯವಸ್ಥೆ ಸಧ್ಯಕಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ರು

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ನೀಡಿದ್ರೆ ನಿಗಮಗಳಿಗೆ 629 ಕೋಟಿ ರೂ. ಹೊರೆಯಾಗುತ್ತದೆ. ಹಾಗಾಗಿ ಉಚಿತ ಬಸ್ ಪಾಸ್ ವ್ಯವಸ್ಥೆ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ ಎಂದು ತಿಳಿಸಿದ್ದಾರೆ.