ಬೆಂಗಳೂರು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾದ ಹೊತ್ತಲ್ಲೇ ಸಿದ್ದರಾಮಯ್ಯರ ಫಾರಿನ್ ಟೂರ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು ಆದ್ರೆ ಮೂರು ದಿನ ಮುಂಚೆಯೇ ವಾಪಸ್ಸು ಬಂದಿದ್ದರಹಿನ್ನೆಲೆಯಲ್ಲಿ ರಾಜಕೀಯ ರಕ್ಕೆ ಪುಕ್ಕ ಹುಟ್ಟಿಕೊಂಡಿದೆ.

ಏಕೆಂದ್ರೆ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬರುತ್ತಿದ್ದಂತೆ, ಕಾಂಗ್ರೆಸ್ ಪಾಳ್ಯದಲ್ಲಿ ವಿದ್ಯುತ್ ಸಂಚಾರವಾಗಿದೆ. ಮುಂಬರುವ ಲೋಕಸಭಾ ಚುನಾವಣೆ, ಹಾಗೂ ಚಳಿಗಾಲದ ಅಧಿವೇಶನ  ಎಲ್ಲವನ್ನು ದೃಷ್ಠಿಯಲ್ಲಿಟ್ಟುಕೊಂಡು ವಾಪಸ್ಸು ಬಂದಿದ್ದಾರೆ ಎಂಬುದು ಸುದ್ದಿ. ರಾತ್ರಿ 12.40 ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಿದ್ದರಾಮಯ್ಯರು ಬಂದಿಳಿದರು.