ಮೈಸೂರು: ವಿಚಾರವಾದಿ, ಜನಪರ ಸಾಹಿತಿ, ಹೋರಾಟಗಾರ ಆದ ಮೈಸೂರಿನ ಸಾಹಿತಿ  ಪ್ರೊ. ಶಿವರಾಮು ಕಾಡನಕುಪ್ಪೆ ಇಂದು ಬೆಳಗ್ಗೆ  ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಅವರಿಗೆ  65 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿಧನರಾಗಿದ್ದಾರೆ. ತಮ್ಮ ದೇಹವನ್ನು ಜೆ ಎಸ್ ಎಸ್ ವೈದ್ಯಕೀಯ ಕಾಲೇಜಿಗೆ ದಾನ ನೀಡಲು ಕುಟುಂಬದವರು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇವರಿಗೆ  ಪುತ್ರಿ ದಂತ ವೈದ್ಯಕೀಯ ಸಹಾಯಕ ಪ್ರಾಧ್ಯಾಪಕಿ ಡಾ. ಸುಶಿ ಕಾಡನಕುಪ್ಪೆ, ಪುತ್ರ ಪತ್ರಕರ್ತ ಡಾ. ನೇಸರ ಕಾಡನಕುಪ್ಪೆ.  ಸೊಸೆ ಮೇಘಾ ಕಾಡನಕುಪ್ಪೆ. ಮೊಮ್ಮಗ ಅಕ್ಷರ ಕಾಡನಕುಪ್ಪೆ. ಅವರನ್ನು ಅಗಲಿದ್ದಾರೆ.