ಬೆಂಗಳೂರು: ಇನ್ಮುಂದೆ ವಾಹನ ಮಾಲಿಕತ್ವ ವರ್ಗಾವಣೆ ಮತ್ತು ಸರಕು ಸಾಗಣೆ ರಹದಾರಿ ಹಾಗೂ ವಾಹನ ಅರ್ಹತಾ ಪ್ರಮಾಣಪತ್ರಗಳ ಸೇವೆ ಪಡೆಯಲು ಇನ್ಮುಂದೆ ಕಡ್ಡಾಯವಾಗಿ ಸೇವಾಸಿಂಧು ಪೋರ್ಟಲ್‌‌ ಮೂಲಕವೇ ಅರ್ಜಿ ಸಲ್ಲಿಸಬೇಕು.

ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ವ್ಯಾಪಾರ ಸರಳೀಕರಣ & ವ್ಯವಹಾರ ಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರುವ ಸಲುವಾಗಿ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಸಕಾಲ ಸೇವೆಗಳನ್ನು ಆನ್‌ಲೈನ್‌ ಮೂಲಕ ನಿರ್ವಹಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.