ಬೆಂಗಳೂರು : ವಾಹನಸವಾರರೆ ಪಿಎಸ್ ಐ ಹುದ್ದೆಗಿಂತ ಕೆಳ ಹಂತದ ಅಧಿಕಾರಿಗಳು ವಾಹನ ಸವಾರರಿಂದ ದಂಡ ವಸೂಲಿ ಮಾಡುವಂತಿಲ್ಲ ಎಂದು ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

ಮೋಟಾರ್ ವಾಹನ ಕಾಯ್ದೆಯಡಿಯಲ್ಲಿ ಎಎಸ್ ಐ ರವರು ಹಾಗೂ ಹೈವೇ ಪೆಟ್ರೋಲಿಂಗ್ ಮತ್ತು ಇಂಟರ್ ಸೆಪ್ಟರ್ ವಾಹನದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಯವರು ಸ್ಥಳ ದಂಡ ವಸೂಲಿಯನ್ನು ಮಾಡುತ್ತಿದ್ದು, ಸ್ಥಳ ದಂಡ ವಸೂಲಿಯ ನೆಪದಲ್ಲಿ ಅಕ್ರಮವಾಗಿ ಹಣವನ್ನು ವಸೂಲಿ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿದ್ದು, ಆದ್ದರಿಂದ ಈ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳ ದಂಡ ವಸೂಲಿಯನ್ನು ಪಿಎಸ್ ಐ ರವರನ್ನು ಹೊರತುಪಡಿಸಿ ಉಳಿದ ಎಎಸ್ ಐ ರವರು ದಂಡ ಮಾಡದಂತೆ ಸೂಚಿಸಲಾಗಿದೆ.