ಬೆಂಗಳೂರು : ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ನಿನ್ನೆ ಗರಿಷ್ಟ ಉಷ್ಣಾಶವು ವಾಡಿಕೆಗಿಂತ 31.6 ಡಿಗ್ರಿ ಸೆಲ್ಪಿಯಸ್ ಇತ್ತು ಸಂಜೆ ಆಗುತ್ತಿದ್ದಂತೆ 20.1 ಡಿಗ್ರಿ ಸೆಲ್ಪಿಯಸ್ ಇತ್ತು ರಾಜ್ಯದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ವಾಯು ಭಾರ ಕುಸಿತದಿಂದ ಇನ್ನೆರೆಡು ದಿನದಲ್ಲಿ ಮಳೆ ಆಗುವ ಸಾಧ್ಯತೆ ಇದೆಯಂತೆ.

ಹಿಂದೂ ಮಹಾಸಾಗರದಲ್ಲಿ ಉಂಟಾದ ವಾಯುಭಾರ ಕುಸಿತ ಅರಬ್ಬೀ ಸಮುದ್ರದ ಭಾಗಕ್ಕೆ ಸಾಗಿ ಬರುತ್ತಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಕರಾವಳಿ, ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.