ಬೆಂಗಳೂರು: ಸಿಇಟಿ ಬರೆಯಲಿರುವ ವಿದ್ಯಾರ್ಥಿಗಳಿಗೆ ವಾಟ್ಸ್‌ಆಯಪ್‌ ಮೂಲಕ ಮಾಹಿತಿ ಒದಗಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಾಗಿದೆ.

ಪ್ರಾಧಿಕಾರವು ವಾಟ್ಸ್‌ಆಯಪ್‌ ಸಂಖ್ಯೆ 9741388123 ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ತಲುಪಿಸಲಿದೆ.

ಸಿಇಟಿ ಅಥವಾ ಪ್ರಾಧಿಕಾರದ ಮಾಹಿತಿ ಕುರಿತು ಅಭ್ಯರ್ಥಿಗಳಿಗೆ ಸಂದೇಹವಿದ್ದರೆ ನೇರ ಈ ವಾಟ್ಸ್‌ಆಯಪ್‌ ಸಂಖ್ಯೆಗೆ ಸಂದೇಶ ಕಳುಹಿಸಿ, ಮಾಹಿತಿ ಪಡೆಯ ಬಹುದು. keauthority-ka@nic.in ಗೆ ಮೇಲ್‌ ಮಾಡಿಯೂ ಮಾಹಿತಿ ಪಡೆಯಬಹುದು ಎಂದು ಪ್ರಾಧಿಕಾರ ತಿಳಿಸಿದೆ.