ಬೆಂಗಳೂರು: ಸಾಮಾಜಿಕ ಜಾಲತಾಣದ ದುರ್ಬಳಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ವಾಟ್ಸ್ ಆಪ್ ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಂದ ಹತ್ಯೆಗಳು ನಡೆಯುತ್ತಿದ್ದು, ಸಾಮಾಜಿಕ ಜಾಲತಾಣದ ಪ್ರಚೋದನಾಕಾರಿ ಅಂಶಗಳನ್ನು ವಾಟ್ಸ್ ಆಪ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವುದು ಆತಂಕದ ವಿಷಯ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಚೋದನಾಕಾರಿ ಅಂಶಗಳು, ಸುಳ್ಳು ಸುದ್ದಿಗಳು ವಾಟ್ಸ್ ಆಪ್ ನಲ್ಲಿ ಹಂಚಿಕೆಯಾಗುತ್ತಿರುವುದನ್ನು ಗಮನಿಸಿದೆ.

ಇದರಿಂದಾಗಿ ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಸುಳ್ಳು ಸುದ್ದಿ, ಪ್ರಚೋದನಾಕಾರಿ ಸುದ್ದಿಗಳು ಪ್ರಚಾರ ಪಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ವಾಟ್ಸ್ ಆಪ್ ನ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ ಹಾಗಾಗಿ ನೀವು ವಾಟ್ಸ್ ಆಪ್ಅಡ್ಮಿನ್ ಆಗಿದ್ದರೆ ವಾಟ್ಸ್ ಆಪ್ ನಲ್ಲಿ ಎಂತ ಸುದ್ದಿ ಹಾಕಬೇಕು ಎಂಬುದು ಯೋಚಿಸಿ ಇಲ್ಲವಾದರೆ ತೊಂದರೆಗೆ ಸಿಕ್ಕಿಕೊಳ್ಳುವುದು ಖಾಯಂ.!