ಬೆಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸಾಪ್, ಗೂಗಲ್ ಪ್ಲೇ ಸ್ಟೋರ್ ನಿಂದ ಇದ್ದಕ್ಕಿದ್ದಂತೆ ಮಾಯವಾಗಿದ್ದು, ಅಪ್ಡೇಟ್ ಮಾಡಿಕೊಳ್ಳುವ ಹಾಗೂ ಹೊಸದಾಗಿ ವಾಟ್ಸಾಪ್ ಇನ್ಸ್ಟಾಲ್ ಮಾಡಿಕೊಳ್ಳುವವರು ಅಚ್ಚರಿಗೊಂಡಿದ್ದಾರೆ.

ವಾಟ್ಸಾಪ್ ಲಭ್ಯವಾಗದಿರುವುದಕ್ಕೆ ಗೂಗಲ್ ಪ್ಲೇ ಸ್ಟೋರ್ ಯಾವ ಸ್ಪಷ್ಟನೆ ನೀಡಿಲ್ಲ. ಆದರೂ ಅಪ್ಡೇಟ್ ಹೊರತುಪಡಿಸಿ ಈ ಮೊದಲು ಡೌನ್ಲೋಡ್ ಮಾಡಿಕೊಂಡವರಿಗೆ ಎಂದಿನಂತೆ ಲಭ್ಯವಾಗುತ್ತಿದೆ. ವಾಟ್ಸಾಪ್ ಬಿಜಿನೆಸ್ ಮಾತ್ರ ಸದ್ಯಕ್ಕೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಿಗುತ್ತಿದೆ.