ಮೈಸೂರು: ಇಂದು ಅಮಿತ್ ಶಾ ಅವರು ವರುಣಾ ಕ್ಷೇತ್ರಕ್ಕೆ ಅಭ್ಯರ್ಥಿಪರ ಪ್ರಚಾರಕ್ಕೆ ಹೋಗಬೇಕಿತ್ತು. ಆದ್ರೆ ಕೊನೆಗಳಿಗೆಯಲ್ಲಿ ಅಮಿತ್ ಶಾ ಕಾರ್ಯಕ್ರಮವನ್ನು ರದ್ದುಮಾಡಿದ್ದಾರೆ.

ಏಕೆಂದ್ರೆ ವರುಣಾ ಕ್ಷೇತ್ರದ ಟಿಕೆಟ್ ಯಡಿಯೂರಪ್ಪ ಮಗ ವಿಜಯೇಂದ್ರ ರಿಗೆ ಸಿಗುತ್ತದೆ ಎಂದು ಚುನಾವಣೆಗೂ ಮುನ್ನಾ ವಿಜಯೇಂದ್ರ  ವರುಣಾದಲ್ಲಿ ಮನೆಮಾಡಿ ಪಕ್ಷದ ಕಾರ್ಯಕರ್ತರನ್ನು ತೆಕ್ಕೆಗೆ ತೆಗೆದುಕೊಂಡು ವಿಶ್ವಾಸ ಗಳಿಸಿದ್ದರು. ಆದ್ರೆ ಟಿಕೆಟ್ ಸಿಗಲಿಲ್ಲ. ಆಗ ವಿಜಯೇಂದ್ರ ರ ಅಭಿಮಾನಿಗಳು ರಸ್ತೆಗಿಳಿದು ಬೀದಿ ರಂಪಾಟ ಮಾಡಿದ್ದು ನೆನಪಿದತಾನೆ.

ಹಾಗಾಗಿ ವರುಣಾ ಕ್ಷೇತ್ರದ ಪ್ರಚಾರಕ್ಕೆ ಅಮಿತ್ ಶಾ ಹೋದರೆ ಎಲ್ಲಿ ವಿಜಯೇಂದ್ರನ ಅಭಿಮಾನಿಗಳು ತೊಂದರೆ ಮಾಡಬಹುದು ಮುಜುಗರಕ್ಕೆ ಒಳಗಾಗುವುದರ ಬದಲು ಹೋಗುವುದೇ ಬೇಡ ಎಂದು ಅಮಿತ್ ಶಾ ಕಾರ್ಯಕ್ರಮವನ್ನು ರದ್ದುಮಾಡಿದ್ದಾರೆ.

ರಾಜ್ಯವನ್ನೇ  ಗೆಲುವು ಹುಮ್ಮಸ್ಸಿನಲ್ಲಿರುವ ಅಮಿತ್ ಶಾ ಕೇವಲ ಮುಜುಗರಕ್ಕೆ ಒಳಗಾಗಬಹುದು ಎಂದು ವರುಣಾ ಕ್ಷೇತ್ರಕ್ಕೆ ಕಾಲಿಡದೇ ಇರುವುದು…?