ಶ್ರಾವಣ ಮಾಸದಲ್ಲಿ ಬರುವಂತಹ ಹುಣ್ಣೆಮೆಗೆ ಮೊದಲಿನ ಶುಕ್ರವಾರದಂದು ಇದನ್ನು ಆಚರಿಸಲಾಗವುದು. ಈ ವರ್ಷ ವರಮಹಾಲಕ್ಷ್ಮೀ ಪೂಜೆಯು ಇಂದು 24ರಂದು ಆಚರಿಸಲಾಗುವುದು. ಪೂಜೆಗೆ ಗುರುವಾರದಂದು ಎಲ್ಲಾ ರೀತಿಯ ತಯಾರಿಗಳನ್ನು ನಡೆಸಲಾಗುವುದು. ಪುರಾಣಗಳಲ್ಲಿ ಬೇರೆ ಬೇರೆ ಹಬ್ಬಗಳ ಆಚರಣೆಗೆ ಇರುವಂತೆ ವರಮಹಾಲಕ್ಷ್ಮೀ ಆಚರಣೆಗು ತನ್ನದೇ ಆಗಿರುವಂತಹ ಕಥೆಯಿದೆ. ಇದಲ್ಲಿ ಜನಪ್ರಿಯವಾಗಿರುವುದು ಚಾರುಮತಿ ಕಥೆ. ಒಂದು ಶಿವ ದೇವರದಲ್ಲಿ ಅವರ ಪತ್ನಿ ಪಾರ್ವತಿಯು ಪ್ರಶ್ನೆಯೊಂದನ್ನು ಕೇಳುವರು.

.ಭೂಮಿ ಮೇಲೆ ಮಹಿಳೆಯರು ತಮಗೆ ಬೇಕಾಗಿರುವ ಒಳ್ಳೆಯ ವೈವಾಹಿಕ ಜೀವನ, ಮಕ್ಕಳು, ಮೊಮ್ಮಕ್ಕಳು ಮತ್ತು ಸಂಪತ್ತನ್ನು ಪಡೆಯುವುದು ಹೇಗೆ ಎಂದು? ವರಮಹಾಲಕ್ಷ್ಮೀ ಪೂಜೆ ಮಾಡುವಂತಹ ಮಹಿಳೆಗೆ ತನ್ನ ಜೀವನದಲ್ಲಿ ಬಯಸಿದ ಎಲ್ಲವೂ ಸಿಗುವುದು ಎಂದು ಶಿವ ದೇವರು, ಚಾರುಮತಿಯ ಕಥೆಯನ್ನು ವಿವರಿಸುವರು. ಮಗದ ದೇಶದಲ್ಲಿ ಸದ್ಗುಣದ ಪ್ರತೀಕದಂತಿದ್ದ ಚಾರುಮತಿ ಎಂಬ ಮಹಿಳೆಯು ಪರಿಪೂರ್ಣ ಪತ್ನಿ, ಸೊಸೆ ಮತ್ತು ತಾಯಿಯಾಗಿರುವಳು. ಆಕೆಯಿಂದ ಪ್ರಭಾವಿತಳಾಗುವ ಲಕ್ಷ್ಮೀ ದೇವಿಯು, ಒಂದು ದಿನ ಚಾರುಮತಿಯ ಕನಸಿನಲ್ಲಿ ಬಂದು ಶ್ರಾವಣ ತಿಂಗಳಲ್ಲಿ ಹುಣ್ಣಿಮೆಗೆ ಮೊದಲು ಬರುವ ಶುಕ್ರವಾರದಂದು ತನ್ನನ್ನು ಪೂಜಿಸುವಂತೆ ಹೇಳುವರು. ಭಕ್ತಿಪೂರ್ವಕವಾಗಿ ಪೂಜೆ ಮಾಡಿದರೆ ಜೀವನದಲ್ಲಿ ಇಚ್ಛಿಸಿರುವುದನ್ನು ಪಡೆಯುವಳು ಎಂದು ಲಕ್ಷ್ಮೀ ದೇವಿಯು ಹೇಳುವರು.

ಲಕ್ಷ್ಮೀ ದೇವರು ಹೇಳಿದಂತೆ ಚಾರುಮತಿಯು ಪೂಜೆ ಮಾಡವಳು ಮತ್ತು ಪೂಜೆಗೆ ನೆರೆಮನೆಯವರು ಹಾಗೂ ಸಂಬಂಧಿಕರನ್ನು ಕರೆಯುವಳು. ಪೂಜೆ ಕೊನೆಗೊಳ್ಳುತ್ತಿದ್ದಂತೆ ಮಹಿಳೆಯು ಚಿನ್ನ ಹಾಗೂ ಅಮೂಲ್ಯ ರತ್ನಗಳಿಂದ ಅಲಂಕರಿಸಲ್ಪಟ್ಟರು ಮತ್ತು ಆಕೆಯ ಮನೆಯು ಬಂಗಾರವಾಯಿತು. ಮಹಿಳೆಯು ಜೀವನಪೂರ್ತಿ ಪೂಜೆ ಮಾಡಿಕೊಂಡು ತನ್ನ ಜೀವನವನ್ನು ಸುಖ ಹಾಗೂ ಸಮೃದ್ಧಿಯಿಂದ ಕಳೆದಳು. ಅಂದಿನಿಂದ ವರಮಹಾಲಕ್ಷ್ಮಿ ಪೂಜೆಯನ್ನು ವಿವಾಹಿತ ಮಹಿಳೆಯರು ನೆರವೇರಿಸುತ್ತಾ ಬಂದಿದ್ದು ಬಂಗಾರಕ್ಕೂ ಮಿಗಿಲಾದ ಆರೋಗ್ಯ ಮತ್ತು ನೆಮ್ಮದಿಗಳನ್ನು ಉಡುಗೊರೆಯಾಗಿ ಪಡೆದುಕೊಳ್ಳುತ್ತಾ ಬಂದಿದ್ದಾರೆ. ಎಂಬುದು ಪ್ರತೀತಿ.