ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು 106 ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗಾಗಿ ಕಳೆದ ಸೆ.24ರಂದು ಪ್ರಾಥಮಿಕ ಹಂತದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಇದರ ಕೀ ಉತ್ತರಗಳನ್ನು ಆಯೋಗದ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಉತ್ತರಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದರೂ ಕೂಡ ಸೆ.1ರ ಸಂಜೆ 5.30ರ ಒಳಗೆ ವಿಕಾಸಸೌಧದ ಪರೀಕ್ಷಾಂಗ ನಿಯಂತ್ರಕರಿಗೆ ಸೂಚಿಸಿರುವ ನಮೂನೆಯ ಅರ್ಜಿಯಲ್ಲಿಯೇ ತುಂಬಿ ಅಂಚೆ ಮೂಲಕ ಕಳುಹಿಸಬೇಕು ಎಂದು ಆಯೋಗ ಸೂಚಿಸಿದೆ.