ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯಕ್ಕೆ 250 ಜನರಿರುವ ಮನಿ ಕಮಾಂಡೋ ಪಡೆ ಬಂದಿಳಿದಿದ್ದಾರೆ. 

ಅಕ್ರಮ ಹಣ ಸಾಗಾಣಿಕೆ ಹಾಗೂ ಹಣ ಸಂಗ್ರಹದ ಮೇಲೆ ಹದ್ದಿನ ಕಣ್ಣಿಡಲು ಮನಿ ಕಮಾಂಡೋ ಪಡೆ ರಾಜ್ಯಕ್ಕೆ ಬಂದಿಳಿದಿದೆ. 

ಕರ್ನಾಟಕದಲ್ಲಿ ಎರಡು ಹಂತದ ಮತದಾನ ನಡೆಯುತ್ತಿರುವುದರಿಂದ 224 ಕ್ಷೇತ್ರಗಳಲ್ಲಿ ತೀವ್ರ ನಿಗಾವಹಿಸಲು ಮನಿ ಪಡೆ, ಅಂದರೆ 250 ಐಟಿ ಅಧಿಕಾರಿಗಳ ತಂಡ ರಾಜ್ಯಕ್ಕೆ ಬಂದಿದೆ. ಇದು ಅಕ್ರಮ ಹಣ ಸಾಗಾಣಿಕೆ, ಅಕ್ರಮ ಹಣ ಸಂಗ್ರಹ ತಡೆಯಲು ಈಗಾಗಲೇ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.

(ಸಾಂದರ್ಭಿಕ ಚಿತ್ರ)