ಬೆಂಗಳೂರು: ಪಿಎಂ ಮೋದಿ ಈ ಬಾರಿ ವಡೋದರಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಖಚಿತವಾಗಿದ್ದು, ಸದ್ಯ ಅವರು ಇನ್ನೊಂದು ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆಯಂತೆ. ಹಾಗಾಗಿ ಬೆಂಗಳೂರು ದಕ್ಷಿಣ ದಿಂದ ಸ್ಪರ್ಧೆಮಾಡುತ್ತಾರೆ ಎಂಬು ಸುದ್ದಿ ಹರಿದಾಡುತ್ತಿದೆ.

ಒಂದೊಮ್ಮೆ ಮೋದಿಯವರು  ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸುವುದಾದರೆ ಅವರಿಗೆ ಕಾಂಗ್ರೆಸ್ ನಿಂದ ಡಿಕೆ ಶಿವಕುಮಾರ್ ಎದುರಾಳಿಯಾಗಲಿದ್ದಾರೆ ಎಂಬುದು ಸುದ್ದಿ.!

ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದ್ದು, ಡಿಕೆಶಿಗೆ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. ಆದರೆ ನರೇಂದ್ರ ಮೋದಿಯವರು ಏನಾದರೂ ಬೆಂಗಳೂರು ದಕ್ಷಿಣ ದಿಂದ ಸ್ಪರ್ಧಿಸಿದರೆ ರಾಜ್ಯದ ರಾಜಕರಣಕ್ಕೆ ಖದರ್ ಬರುತ್ತದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.!