ದಾವಣಗೆರೆ : ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ಹೆಸರು ಘೋಷಣೆಯಾಗಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಶಾಸಕ ಶಾಮನೂರು ಶಿವಶಂಕಪ್ಪ.

ನಾನು ಹಿಂದೆ ಟಿಕೆಟ್ ಕೇಳ್ದಾಗ ನಿಮಗೆ ವಯಸ್ಸಾಗಿದೆ ಅಂತ ಹೇಳಿದ್ರು, ಇದೀಗ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ನನ್ನ ಹೆಸರಿರುವುದು ನೋಡಿ ಆಶ್ಚರ್ಯವಾಗಿದೆ ಅಂತ ಶಾಮನೂರು ಶಿವಶಂಕರಪ್ಪ ಹೇಳಿದ್ರು.

ಈ ಬಗ್ಗೆ ಬೆಂಗಳೂರಿಗೆ ಹೋಗಿ ಪಕ್ಷದ ಹಿರಿಯರಲ್ಲಿ ಮಾತನಾಡುತ್ತೇನೆ. ಹಾಗೇ ನನ್ನ ಮಗ ಮಲ್ಲಿಕಾರ್ಜುನನಿಗೆ ಟಿಕೆಟ್ ಕೊಡಬೇಕೆಂದು ವರಿಷ್ಠರ ಬಳಿ ಯಾವುದೇ ಕಾರಣಕ್ಕೂ ಒತ್ತಡ ಹಾಕುವುದಿಲ್ಲ ಎಂದು ಹೇಳಿಬಿಟ್ರು.!