ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ 13ಕ್ಕೂ ಹೆಚ್ಚು ಸ್ಥಾನಗಳಲ್ಲಿಗೆದ್ದರೆ  ಮೈತ್ರಿ ಕಟ್! ಆಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ.
ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ 13ಕ್ಕೂ ಹೆಚ್ಚು ಸ್ಥಾನಗಳನ್ನು ಹಾಗೂ ಜೆಡಿಎಸ್ 2ರಿಂದ 3ಕ್ಕೆ ಸೀಮಿತವಾದರೆ ‘ಕೈ’ ನಾಯಕರು ಮೈತ್ರಿಯಿಂದ ಹಿಂದೆ ಸರಿದು ಹೊಸ ವಿಧಾನಸಭಾ ಚುನಾವಣೆಗೆ ಸಿದ್ಧರಾಗುತ್ತಾರಂತೆ.!

ಕಾಂಗ್ರೆಸ್ ದೇಶದಲ್ಲಿ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಹಿಡಿದರೆ ಮರು ಚುನಾವಣೆಗೆ ಸಿದ್ಧವಾಗುತ್ತದೆ. ಒಂದು ವೇಳೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿಲ್ಲ ಎಂದಾದಲ್ಲಿ ಮೈತ್ರಿ ಸರ್ಕಾರಕ್ಕೆ ಯಾವುದೇ ಕಂಟಕವಿಲ್ಲ ಎಂಬ ವಿಚಾರ ಎರಡು ಪಕ್ಷದಲ್ಲಿ ಚರ್ಚೆನಡೆಯುತ್ತಲಿದೆ.!