ಬೆಂಗಳೂರು: ಜೂನ್ 1ರ ಬದಲು 5ರಂದು ಮಾನ್ಸೂನ್ ಮಾರುತಗಳು ಕೇರಳ ತಲುಪುವ ಸಾಧ್ಯತೆ ಇದೆ. ಹೀಗಾಗಿ ಮಾನ್ಸೂನ್ ಆರಂಭ ನಾಲ್ಕು ದಿನ ವಿಳಂಬವಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಈ ಬಾರಿಯ ಮಾನ್ಸೂನ್ ಉತ್ತಮವಾಗಿರಲಿದ್ದು ದೀರ್ಘಾವಧಿಯಲ್ಲಿ ಸರಾಸರಿ 88 ಸೆಂ.ಮೀ ಮಳೆಯಾಗಬಹುದು. ಇದರಿಂದ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿದ್ದ ಕೃಷಿ ವಲಯ ಚೇತರಿಕೆ ಕಾಣಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.