ಗದಗ: ಲಿಂಗಾಯಿತ ಪ್ರತ್ಯೇಕ ಧರ್ಮಕ್ಕೆ ಸಂಬಂಧಸಿದಂತೆ ಅಂದಿನ ಕಾಂಗ್ರೆಸ್ ಸರಕರ ತೆಗದುಕೊಂಡ ನಿರ್ಣಯದಿಂದ ದೊಡ್ಡ ತಪ್ಪು ಆಯಿತು ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಗದಗದ ಲಕ್ಷ್ಮೇಶ್ವರದಲ್ಲಿ ರಂಭಾಪುರಿಶ್ರೀಗಳ ದಸರಾ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಜನಸಂಪನ್ಮೂಲ ಸಚಿವ ಡಿಕೆಶಿ ಮಾತನಾಡುತ್ತ, ನಮ್ಮ ಸರ್ಕಾರ ರಾಜ್ಯದಲ್ಲಿ ಒಂದು ದೊಡ್ಡ ತಪ್ಪು ಮಾಡಿದೆ. ಯಾವುದೇ ರಾಜಕಾರಣಿಯಾಗಲಿ, ಸರ್ಕಾರವಾಗಲಿ ಧರ್ಮ, ಸಂಸ್ಕೃತಿ, ಜಾತಿ ವಿಚಾರದಲ್ಲಿ ಕೈಹಾಕಬಾರದು ಎಂದು ಹೇಳುತ್ತೇನೆ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನಮ್ಮಿಂದ ತಪ್ಪಾಗಿದೆ ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದರು.