ದಾವಣೆಗೆರೆ : ವೀರಶೈವ – ಲಿಂಗಾಯಿತ ಧರ್ಮಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನಿನ್ನೆ ಲಿಂಗಾಯಿತ ಧರ್ಮ ದ ಪರವಾಗಿ ಹೇಳಿಕೆ ನೀಡಿದ್ರು ಆದ್ರೆ ಇಂದು ಉಲ್ಟಾವಡೆದಿದ್ದಾರೆ ಯಾಕಂದ್ರೆ.?

ಇಂದು ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಯಡಿಯೂರಪ್ಪ ಸೇರಿದಂತೆ ಅಖಿಲ ಭಾರತ ವೀರಶೈವ ಸಭಾದ ಮುಖ್ಯಸ್ಥರು ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ ಈ ವಿಷಯವಾಗಿ ಸಾಕಷ್ಟು ಗೊಂದಲ ಇತ್ತು ಸಂಪೂರ್ಣ ಮಾಹಿತಿ ಲಭ್ಯ ಇರಲಿಲ್ಲ ಹಾಗಾಗಿ ಸರ್ಕಾರದ ನಿರ್ಧಾರದ ಪರವಾಗಿ ಮಾತನಾಡಿದೆ ಆದರೆ ಈಗ ರಾಜ್ಯ ಸರ್ಕಾರದ ಯೋಜನೆ ಅರಿವಿಗೆ ಬಂದಿದೆ ಸಂಪುಟ ಸಭೆಯ ನಿರ್ಧಾರವನ್ನು ಅಖಿಲ ಭಾರತ ವೀರಶೈವ ಮಹಾಸಭಾವು ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.