ಬೆಂಗಳೂರು: ಕರ್ನಾಟಕ ಸರ್ಕಾರವು 4ನೇ ಲಾಕ್ ಡೌನ್ ನ 2ನೇ ಇಂದು ಸಂಜೆ 7 ಗಂಟೆಯಿಂದ
ಭಾನುವಾರವಾದ ನಾಳೆ ಕರ್ಫ್ಯೂ ಹೇರಲು ನಿರ್ಧರಿಸಿದೆ.

ಸೋಮವಾರ ಬೆಳಗ್ಗೆ 7 ಗಂಟೆವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದ್ದು, ಅಗತ್ಯ ಸೇವೆಗಳ ವಸ್ತುಗಳಾದ, ಹಾಲು, ವೃತ್ತಪತ್ರಿಕೆ, ಆಸ್ಪತ್ರೆ, ತರಕಾರಿ ಮತ್ತು ಮಾಂಸ ಮಾರಾಟ, ಮದುವೆ ಸಮಾರಂಭಕ್ಕೆ ಅಡ್ಡಿ ಇರಲ್ಲ. ಆರೋಗ್ಯ ಸಿಬ್ಬಂದಿ ಓಡಾಡಬಹುದಾಗಿದ್ದು, ಮೆಡಿಕಲ್ ಕೂಡ ತೆರೆಯಬಹುದಾಗಿದೆ.

ಇನ್ನು ಸರ್ಕಾರಿ ಬಸ್, ಓಲಾ, ಊಬರ್, ಟ್ಯಾಕ್ಸಿ ಓಡಾಡಲ್ಲ. ಸಲೂನ್, ಬಟ್ಟೆ ಅಂಗಡಿ, ಪಾರ್ಕ್, ಕಾರ್ಖಾನೆ, ಗಾರ್ಮೆಂಟ್ಸ್, ಎಪಿಎಂಸಿ ಮಾರುಕಟ್ಟೆ ಮದ್ಯದಂಗಡಿಗಳು ಕನಿಷ್ಟ 36 ಗಂಟೆ ಎಣ್ಣೆ ಬಂದ್ ಆಗಲಿವೆ.