ಬೆಂಗಳೂರು: ಏಪ್ರಿಲ್ 14ಕ್ಕೆ ಲಾಕ್ ಡೌನ್ ಮುಗಿಯುತ್ತೆ ಅನ್ನೊಂದರ ಬಗ್ಗೆ ಅನುಮಾನ ಹುಟ್ಟಿಸಿದೆ. ಹೌದು, ಕನ್ನಡದ ಖಾಸಗಿ ಸುದ್ದಿವಾಹಿನಿಯೊಂದರ ಜೊತೆಗೆ ಸಂದರ್ಶನವೊಂದರಲ್ಲಿ ಸಿಎಂ ಬಿಎಸ್‌ವೈ ಅವರು ಈ ಬಗ್ಗೆ ಹೇಳಿಕೊಂಡಿದ್ದು, ಇದೇ ವೇಳೆ ಅವರು ಲಾಕ್‌ಡೌನ್‌ ಸಮರ್ಥವಾಗಿ ಆಗಿಲ್ಲ, ಮುಂಬರುವ ದಿವಸದಲ್ಲಿ ಈ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸಿದ ಬಳಿಕ ಹಾಗೂ ಪ್ರಧಾನಿ ಮೋದಿಯವರ ಆದೇಶದ ಅನ್ವಯ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಅಂತ ಹೇಳಿದ್ದಾರೆ.

ಒಟ್ಟಿನಲ್ಲಿ ಖುದ್ದು ಸಿಎಂ ಅವರು ಸರಿಯಾಗಿ ಲಾಕ್‌ಡೌನ್ ಆಗಿಲ್ಲ ಅಂತ ಒಪ್ಪಿಕೊಂಡಿರುವುದು ಕೂಡ ಅನೇಕ ಅನುಮಾನಗಳಿಗೆ ಕಾರಣವಾಗಿದ್ದು, ಇತ್ತ ಕಡೆ ಸಿಎಂ ಬಿಎಸ್‌ವೈ ಅವರ ಮಾತನ್ನು ನೋಡುತ್ತಿದ್ದರೆ, ಏ.14ಕ್ಕೆ ಲಾಕ್‍ಡೌನ್ ಮುಗಿಯುತ್ತೆ ಅನ್ನೊಂದು ಅನುಮಾನ ಎನ್ನಲಾಗುತ್ತಿದೆ. !

( ಸಾಂದರ್ಭಿಕ ಚಿತ್ರ)