ನವದೆಹಲಿ: ಇನ್ನೂ ಮೂರು ತಿಂಗಳು ಇಎಂಐ ಪಾವತಿ ಮುಂದೂಡಿಕೆ ಮಾಡಲು ಭಾರತೀಯ ರಿಸರ್ಸ್ ಬ್ಯಾಂಕ್ ಚಿಂತನೆ ನಡೆಸಿದೆಯಂತೆ.!

ಲಾಕ್ ಡೌನ್ ಮುಂದುವರಿಕೆಯಾಗಿರುವುದರಿಂದ, ಈಗಾಗಲೇ 3 ತಿಂಗಳು ಇಎಂಐ ಪಾವತಿಸುವುದನ್ನು ಮುಂದೂಡಲಾಗಿದ್ದು, ಮತ್ತೆ 3 ತಿಂಗಳು ಇಎಂಐ ಪಾವತಿ ಮುಂದೂಡಿಕೆ ಮಾಡಲಾಗುವುದು.!

ಭಾರತೀಯ ರಿಸರ್ವ್ ಬ್ಯಾಂಕ್ ಈ ಕುರಿತಾಗಿ ಚರ್ಚೆ ನಡೆಸಿದ್ದು, ಬ್ಯಾಂಕ್ ಗಳಿಂದಲೂ ಇಎಂಐ ಮುಂದೂಡಿಕೆ ಮಾಡಲು ಸಮ್ಮತಿ ಸಿಕ್ಕಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಆಗಬೇಕಿದೆ. ಇದಿನ್ನೂ ಚರ್ಚೆಯ ಹಂತದಲ್ಲಿದ್ದು, ಶೀಘ್ರವೇ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿದುಬಂದಿದೆ.