ಬೆಂಗಳೂರು: ಪ್ರಸ್ತುತ ಜಾರಿಯಲ್ಲಿರುವ ಲಾಕ್ ಡೌನ್ 4.0 ಅವಧಿ ಮೇ. 31 ಕ್ಕೆ ಅಂತ್ಯವಾಗಲಿದೆ. ಬಳಿಕ ಮಾರ್ಗಸೂಚಿಗಳು ಮತ್ತು ನಿರ್ಬಂಧಗಳನ್ನು ತೆಗೆದುಕೊಳ್ಳಲು ರಾಜ್ಯಗಳಿಗೇ ಅಧಿಕಾರ ನೀಡುವ ಸಾಧ್ಯತೆ ಇದೆಯಂತೆ.

ಕೇಂದ್ರ ಸರಕಾರ ಸುಮಾರು 70 ಪ್ರತಿಶತದಷ್ಟು ಪ್ರಕರಣಗಳನ್ನು ಹೊಂದಿರುವ 11 ನಗರಗಳತ್ತ ಹೆಚ್ಚಿನ ಗಮನ ಹರಿಸುವುದರೊಂದಿಗೆ ಮುಂದಿನ ಎರಡು ವಾರಗಳ ಕಾಲ ಲಾಕ್‌ಡೌನ್‌ಗಳನ್ನು ಹೇರಲಿದೆ ಎನ್ನಲಾಗಿದೆ.

ಮುಖ್ಯ ವಾಗಿ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಅಹಮದಾಬಾದ್ ಮತ್ತು ಕೋಲ್ಕತ್ತಾದ ಆರು ಪ್ರಮುಖ ಮೆಟ್ರೋ ನಗರಗಳು, ಜೊತೆಗೆ ಪುಣೆ, ಥಾಣೆ, ಜೈಪುರ, ಸೂರತ್ ಮತ್ತು ಇಂದೋರ್ ಇದರಲ್ಲಿ ಸೇರಿವೆ. ಮುಂದಿನ ಹಂತದ ಲಾಕ್‌ಡೌನ್ ಮಾಲ್‌ಗಳು, ಸಿನೆಮಾ ಹಾಲ್‌ಗಳು, ಶಾಲೆಗಳು, ಕಾಲೇಜುಗಳು, ಇತರ ಶಿಕ್ಷಣ ಸಂಸ್ಥೆಗಳು ಮತ್ತು ದೊಡ್ಡ ಕೂಟಗಳನ್ನು ನಡೆಸಬಹುದಾದ ಇತರ ಸ್ಥಳಗಳ ಮೇಲೆ ನಿರ್ಬಂಧಗಳನ್ನು ಮುಂದುವರೆಸುವ ಸಾಧ್ಯತೆಯಿದೆಯಂತೆ.!