ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕಂಪನಿಯು ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ತನ್ನ ಎಲ್ಲಾ ಪ್ರೀ-ಪೈಡ್ ಬಳಕೆದಾರರ ರಿಚಾರ್ಜ್ ಅವಧಿ ಮುಗಿದಿದ್ದರೂ ಸೇವೆಯನ್ನು ಏ.20ರವರೆಗೆ ವಿಸ್ತರಿಸಿರುವ ಕಂಪನಿ, ಜೀರೋ ಬ್ಯಾಲನ್ಸ್ ಇರುವ ಗ್ರಾಹಕರಿಗೆ 10 ರೂ. ಉಚಿತ ಟಾಕ್ ಟೈಮ್ ಕೂಡ ಘೋಷಿಸಿದೆ.

ಇದು ಎಲ್ಲಾ ಗ್ರಾಹಕರಿಗೂ ಅನ್ವಯವಾಗಲಿದ್ದು, ದೇಶದ ಯಾವುದೇ ಮೂಲೆಗೆ ಕರೆ ಮಾಡಬಹುದಾಗಿದೆ. ಕೊರೋನಾ ವೈರಸ್ ಭೀತಿಯಿಂದ ದೇಶಾದ್ಯಂತ ಲಾಕ್ ಡೌನ್ ಹೇರಿರುವ ಕಾರಣ ಕಂಪನಿ ಈ ಆಫರ್ ಘೋಷಿಸಿದೆ.