ಬೆಂಗಳೂರು: ಸರ್ವಪಕ್ಷಗಳ ಶಾಸಕರ ಸಭೆ ಯಲ್ಲಿ ಕೊರೋನಾ ನಿಯಂತ್ರಣದ ಬಗ್ಗೆ ಚರ್ಚಿಸಿದ ನಂತರ  ಸಿಎಂ ಬಿಎಸ್ ವೈ ಅವರು ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡಲ್ಲ  ಅಂತ ಹೇಳಿದ್ದಾರೆ..

ಈ ಸಭೆಯಲ್ಲಿ ವಿಪಕ್ಷಗಳ ಶಾಸಕರ ಅಭಿಪ್ರಾಯ ಪರಿಗಣಿಸದ ಯಡಿಯೂರಪ್ಪನವರು ಮತ್ತೆ ಲಾಕ್​ಡೌನ್​​ ಮಾಡಲಾಗಲ್ಲ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಗೋಪಾಲಯ್ಯ, ಎಸ್‌.ಟಿ ಸೋಮಶೇಖರ್, ಮಂಜುನಾಥ್, ಎಂ ಕೃಷ್ಣಪ್ಪ, ರಾಮಲಿಂಗಾರೆಡ್ಡಿ, ಕೃಷ್ಣ ಭೈರೇಗೌಡ, ರಿಜ್ವಾನ್ ಹರ್ಷದ್, ಹ್ಯಾರಿಸ್, ರವಿ ಸುಬ್ರಹ್ಮಣ್ಯ, ಭೈರತಿ ಸುರೇಶ್, ಸತೀಶ್ ರೆಡ್ಡಿ ಸೇರದಿಂತೆ ಹಲವಾರು ಮುಖಂಡರುಗಳು ಭಾಗವಹಿಸಿದ್ದರು.

ಇದಕ್ಕೂ ಮುನ್ನಾ ಸುದ್ದಿ ಗೋಷ್ಠಿಯಲ್ಲಿ  ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆಯೇ ಮುಖ್ಯ .ಆದರೆ ಮತ್ತೊಮ್ಮೆ ಬೆಂಗಳೂರನ್ನು ಲಾಕ್​ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಖಡಕ್​ ಆಗಿ ಹೇಳಿದ್ದಾರೆ.