ಚಿತ್ರದುರ್ಗ: ಜಾತಿ ಜಾತಿ ಧರ್ಮಗಳ ನಡುವೆ ಗೊಂದಲ ಸೃಷ್ಟಿಸಿ ದೇಶದ ಶಾಂತಿಯನ್ನು ಕದಡುತ್ತಿರುವ ಕೋಮುವಾದಿ ಬಿಜೆಪಿ.ಡೋಂಗಿಗಳನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸುವುದಾಗಿ ಚಿತ್ರದುರ್ಗ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ವೆಂಕಟೇಶ್ ಬೆಂಬಲ ಸೂಚಿಸಿದರು.

ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಗುಡ್ಡಗಾಡು ವಾಸಿ. ಕಷ್ಟ ಜೀವಿಗಳಾಗಿರುವ ಲಂಬಾಣಿ ಜನಾಂಗದವರ ಮೇಲೆ ಕಾಂಗ್ರೆಸ್ ಹಿಂದಿನಿಂದಲೂ ಅಪಾರ ಗೌರವವಿಟ್ಟುಕೊಂಡು ಬಂದಿದೆ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಲಂಬಾಣಿ ತಾಂಡಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿ ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದಾರೆ. ಸಮಾಜ ಕಲ್ಯಾಣ ಸಚಿವರಾಗಿದ್ದ ಹೆಚ್.ಆಂಜನೇಯ ಲಂಬಾಣಿ ತಾಂಡಗಳಿಗೆ 250 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿ ಸಿ.ಸಿ.ರಸ್ತೆ, ಒಳಚರಂಡಿ, ಕುಡಿಯುವ ನೀರು, ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದಾರೆ.

ಸಂಸದ ಬಿ.ಎನ್.ಚಂದ್ರಪ್ಪನವರು ಪ್ರತಿ ಹಳ್ಳಿಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದಾರೆ. ಸಿದ್ದರಾಮಯ್ಯನವರು ಅನ್ನಭಾಗ್ಯ, ಪಶುಭಾಗ್ಯ, ಕೃಷಿ ಭಾಗ್ಯ ನೀಡಿದ್ದಾರೆ. ಒಂದು ಲಕ್ಷ ಎಂಬತ್ತು ಸಾವಿರ ಕುಟುಂಬಗಳಿಗೆ ಬಿ.ಪಿ.ಎಲ್.ಕಾರ್ಡ್ ಸಿಕ್ಕಿದೆ. ಎಲ್ಲಿಂದಲೋ ಬಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ.ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎ.ನಾರಾಯಣಸ್ವಾಮಿರವರ ಕೊಡುಗೆ ಏನು ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸುವಂತೆ ಲಂಬಾಣಿ ಸಮಾಜದ ಮುಖಂಡರುಗಳಲ್ಲಿ ಕೋರುತ್ತೇವೆ ಎಂದು ಹೇಳಿದರು.

ಹೊಳಲ್ಕೆರೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯು.ವೆಂಕಟೇಶ್‍ನಾಯ್ಕ, ಗ್ರಾ.ಪಂ.ಮಾಜಿ ಸದಸ್ಯರುಗಳಾದ ಎಲ್.ರೇವಣಪ್ಪ, ಕೆ.ಪುಟ್ಟಾನಾಯ್ಕ, ಲಂಬಾಣಿ ಸಮಾಜದ ಮುಖಂಡ ಹೆಚ್.ವೆಂಕಟೇಶ್‍ನಾಯ್ಕ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.