ಬೆಂಗಳೂರು: ಬೆಂಗಳೂರಿನ ರೌಡಿ ಕೃಷ್ಣಮೂರ್ತಿ ಅಲಿಯಾಸ್ ಕೊರಂಗು‌ ಕೃಷ್ಣ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ. ಬೆಂಗಳೂರಿನಲ್ಲಿ ಭೂಗತ ಡಾನ್ ಎಂದು ಕರೆಸಿಕೊಳ್ಳುತ್ತಿದ್ದ ಕೊರಂಗು  1994ರಲ್ಲಿ ತೆರೆಕಂಡ ಓಂ ಸಿನಿಮಾದಲ್ಲಿ ನಟಿಸಿದ್ದ.

ಕೃಷ್ಣಮೂರ್ತಿ ಅಲಿಯಾಸ್ ಕೊರಂಗು‌ ಕೃಷ್ಣ ಹಲವು ದಿನಗಳಿಂದ‌ ಲಿವರ್ ಡ್ಯಾಮೇಜ್​​ನಿಂದ ಬಳಲುತ್ತಿದ್ದ. ಈ ಸಂಬಂಧ ಚಿತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.